ಉದಯವಾಹಿನಿ,ನವದೆಹಲಿ: ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ಗೆ ಕಾಲಿಟ್ಟಾಗಿನಿಂದ, ಅವರು ಭಾರತಕ್ಕೆ ಬರುವುದು ಅಪರೂಪವಾಗಿದೆ. ಅವರು ಭಾರತಕ್ಕೆ ಮರಳುವುದನ್ನುಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಪ್ರಿಯಾಂಕಾ ಭಾರತಕ್ಕೆ ಮರಳಿದ್ದಾರೆ. ಕಳೆದ ರಾತ್ರಿ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿ ಜೊತೆ ಭಾರತಕ್ಕೆ ಬಂದಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಜೊತೆ ಮಾಲ್ತಿ ಕಾಣಿಸಿಕೊಂಡಿರಲಿಲ್ಲ.
ಮಾಮಿ ಫಿಲ್ಮ್ ಫೆಸ್ಟಿವಲ್ ೨೦೨೩ ರಲ್ಲಿ ಪಾಲ್ಗೊಳ್ಳಲು ಪ್ರಿಯಾಂಕಾ ಭಾರತಕ್ಕೆ ಬಂದಿದ್ದಾರೆ. ಇಂದಿನಿಂದ ಈ ಹಬ್ಬ ಆರಂಭವಾಗಲಿದೆ. ಮಾಮಿ ಚಲನಚಿತ್ರೋತ್ಸವವು ಅಕ್ಟೋಬರ್ ೨೭ ರಿಂದ ನವೆಂಬರ್ ೫ ರವರೆಗೆ ನಡೆಯಲಿದೆ. ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಅವರ ಸ್ಟೈಲ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಪಾಪರಾಜಿಗಳಿಗೂ ಕೈಮುಗಿದು ಪ್ರಿಯಾಂಕಾ ನಮಸ್ಕರಿಸಿದರು.ನಟಿ ಮಾಧ್ಯಮದವರನ್ನು ಕೈಮುಗಿದು ಫೋಟೋಗಳಿಗೆ ಪೋಸ್ ನೀಡಿದರು.

Leave a Reply

Your email address will not be published. Required fields are marked *

error: Content is protected !!