ಉದಯವಾಹಿನಿ, ವಾರಣಾಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಓಡಾಡುತ್ತಿರುವ ಬೀದಿ ನಾಯಿಯೊಂದು ವಿದೇಶದಲ್ಲಿ ನೆಲೆ ಕಂಡುಕೊಳ್ಳಲು ಹೊರಟಿದೆ. ನೆದರ್‌ಲ್ಯಾಂಡ್‌ನ ಮಹಿಳೆಯೊಬ್ಬರು ಜಯಾ ಎಂಬ ಹೆಸರಿನ ನಾಯಿಯನ್ನು ದತ್ತು ಪಡೆದಿದ್ದಾರೆ.ನಾಯಿ ಜಯಾ ತನ್ನ ಹೊಸ ಮಾಲೀಕರೊಂದಿಗೆ ಪಾಸ್‌ಪೋರ್ಟ್ ಮತ್ತು ವೀಸಾದೊಂದಿಗೆ ನೆದರ್‌ಲ್ಯಾಂಡ್‌ಗೆ ಹಾರಲು ಸಿದ್ಧವಾಗಿದೆ.
ಅಕ್ಟೋಬರ್ ೩೧ ರಂದು ಜಯಾ ದೆಹಲಿಯಿಂದ ವಿಮಾನದ ಮೂಲಕ ಆಮ್ಸ್ಟರ್‌ಡ್ಯಾಮ್‌ಗೆ ತೆರಳಲಿದೆ.ಕಳೆದ ವರ್ಷ ನೆದರ್‌ಲ್ಯಾಂಡ್‌ನ ಮಿರಾಲ್ ಎಂಬ ಪ್ರವಾಸಿ ಬನಾರಸ್‌ಗೆ ಭೇಟಿ ನೀಡಲು ಬಂದಿದ್ದಾಗ ಬನಾರಸ್‌ನ ಬೀದಿಗಳಲ್ಲಿ ತಿರುಗಾಡುತ್ತಿದ್ದ ಬೀದಿ ನಾಯಿಗಳಿಗೆ ಮನಸೋತಿದ್ದರು. ನಂತರ ಸರ್ಕಾರೇತರ ಸಂಸ್ಥೆಯೊಂದರ ನೆರವಿನೊಂದಿಗೆ ಬೀದಿ ನಾಯಿ ಜಯಾ ದತ್ತು ಪಡೆಯುವ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದರು.
ಮಾಹಿತಿಯ ಪ್ರಕಾರ, ನೆದರ್ಲ್ಯಾಂಡ್ಸ್ ನಿವಾಸಿಯಾಗಿರುವ ಮಿರಲ್ ಬೊಂಟೆನ್ಬೆಲ್ ಅವರು ಆಗಾಗ್ಗೆ ವಾರಣಾಸಿಗೆ ಭೇಟಿ ನೀಡುತ್ತಿದ್ದರು . ಆಗ ವಾರಾಣಸಿಯಲ್ಲಿ ಅವರಿಗೆ ಜಯ ಎಂಬ ಬೀದಿ ನಾಯಿ ಸಿಕ್ಕಿದೆ.
