ಉದಯವಾಹಿನಿ, ಮುಂಬೈ : ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಕಾಂಬಿನೇಷನ್ ನ ‘ಅನಿಮಲ್ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದ್ದು, ಈ ಹಾಡಿನಲ್ಲೂ ರಣಬೀರ್ ಜೊತೆ ರಶ್ಮಿಕಾ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ಸತ್ರಂಗ.. ಹೆಸರಿನಲ್ಲಿ ಈ ಹಾಡು ಮೂಡಿ ಬಂದಿದ್ದು, ಈ ಹಾಡಿನಲ್ಲಿ ಜೋಡಿ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಹುವಾ ಮೇ ಹಾಡಿನಲ್ಲೂ ಇಬ್ಬರೂ ಲಿಪ್ ಲಾಕ್ ಆಗಿದ್ದರು.
ಹುವಾ ಮೇ ಹಾಡಿನಲ್ಲಿ ರಣಬೀರ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ಲಿಪ್ ಲಾಕ್ ಮಾಡಿಕೊಂಡಿದ್ದರು. ವಿಮಾನದಲ್ಲಿ ಮಾತ್ರವಲ್ಲ, ಮನೆಯವರ ಎದುರೇ ರಣಬೀರ್ ಗೆ ಲಿಪ್ ಲಾಕ್ ಮಾಡುವ ದೃಶ್ಯಗಳು ವೈರಲ್ ಆಗಿದ್ದವು. ರಣಬೀರ್ ಜೊತೆ ರಶ್ಮಿಕಾ ಲಿಪ್ ಲಾಕ್ ಮಾಡಿಕೊಂಡರೆ, ವಿಜಯ್ ದೇವರಕೊಂಡ ಗತಿ ಏನು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು. ಈ ಹಿಂದೆ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಕಾಂಬಿನೇಷನ್ ನ ನಟನೆಯ ಅನಿಮಲ್ ಸಿನಿಮಾದ ಹಾಡೊಂದು ರಿಲೀಸ್ ಆಗಿತ್ತು. ‘ಹುವಾ ಮೈನ್ ಹೆಸರಿನ ಈ ಹಾಡಿನಲ್ಲಿ ರಶ್ಮಿಕಾ ಮತ್ತು ರಣಬೀರ್ ತುಟಿಗೆ ತುಟಿಗೆ ಬೆರೆಸಿದ್ದರು. ಈ ದೃಶ್ಯವನ್ನು ಕಂಡ ಫ್ಯಾಮಿಲಿ ಶಾಕ್ ಆಗಿದ್ದರು. ತನ್ನ ಗೆಳೆಯನನ್ನು ಕುಟುಂಬಕ್ಕೆ ಪರಿಚಯಿಸುವಂತಹ ಗೀತೆ ಇದಾಗಿತ್ತು. ಮನೆಯಲ್ಲಿ ಮತ್ತು ವಿಮಾನದಲ್ಲಿ ಎರಡರಲ್ಲೂ ಈ ಜೋಡಿ ಲಿಪ್ ಲಾಕ್ ಮಾಡಿಕೊಂಡಿತ್ತು.
