ಉದಯವಾಹಿನಿ, ಬೆಂಗಳೂರು: ಮೆಟ್ರೋ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬಿಎಂಟಿಸಿ ಈಗಾಗಲೇ ಹಲವು ಮಾರ್ಗಗಳಲ್ಲಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಆರಂಭಿಸಿದೆ. ಇದೀಗ ಹೊಸ ಮಾರ್ಗವೊಂದು ಆರಂಭಿಸಿದ್ದಾರೆ.ಇದು ಮೆಟ್ರೋ ಪ್ರಿಯರಿಗೆ ಸಂತಸದ ಸುದ್ದಿಯಾಗಿದೆ.
ಈ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುಲಭ, ರಿಯಾಯಿತಿ, ಅತ್ಯಾಧುನಿಕ, ದಕ್ಷ ಮತ್ತು ಪರಿಣಾಮಕಾರಿ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ೫೫೯೬ ವೇಳಾಪಟ್ಟಿಗಳಲ್ಲಿ ೫೭,೪೬೩ ವಿವಿಧ ರೀತಿಯ ಬಸ್‌ಗಳನ್ನು ಒದಗಿಸಿದೆ ಎಂದು ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ನಗರ ಮತ್ತು ಅದರ ಉಪನಗರಗಳ ಸುತ್ತಳತೆ ೩೭ ಲಕ್ಷ ಕಿ.ಮೀ. ಪ್ರಯಾಣಿಕರ ಬೇಡಿಕೆ/ದಟ್ಟಣೆಗೆ ಅನುಗುಣವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರತಿದಿನ ಸರಾಸರಿ ೪೩ ಲಕ್ಷ ಪ್ರಯಾಣಿಕರು ಇಂತಹ ಸಾರಿಗೆಯ ಲಾಭ ಪಡೆಯುತ್ತಿದ್ದಾರೆ ಎಂದು ಅದು ಹೇಳಿದೆ.
