ಉದಯವಾಹಿನಿ, ಜಮ್ಮು ಕಾಶ್ಮೀರ: ಅಂತರಾಷ್ಟ್ರೀಯ ಗಡಿಯಲ್ಲಿನ ಭಾರತೀಯ ಪೋಸ್ಟ್ಗಳ ಮೇಲೆ ಮತ್ತು ಹಳ್ಳಿಗಳ ಮೇಲೆ ಪಾಕಿಸ್ತಾನ ಸೇನೆ ಇತ್ತೀಚೆಗೆ ಅಪ್ರಚೋದಿತ ಗುಂಡಿನ ದಾಳಿ ಮತ್ತು ಮೋರ್ಟಾರ್ ಶೆಲ್ ದಾಳಿಗೆ ಸಂಬಂಧಿಸಿದಂತೆ ಗಡಿ ಭದ್ರತಾ ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿನ ಭಾರತೀಯ ಪೋಸ್ಟ್ಗಳ ಮೇಲೆ ಮತ್ತು ಹಳ್ಳಿಗಳ ಮೇಲೆ ಪಾಕಿಸ್ತಾನ ಸೇನೆ ಇತ್ತೀಚೆಗೆ ಅಪ್ರಚೋದಿತ ಗುಂಡಿನ ದಾಳಿ ಮತ್ತು ಮೋರ್ಟಾರ್ ಶೆಲ್ ದಾಳಿಗೆ ಸಂಬಂಧಿಸಿದಂತೆ ಗಡಿ ಭದ್ರತಾ ಪಡೆ(ಬಿಎಸ್ಎಫ್) ಶನಿವಾರ ತೀವ್ರ ಪ್ರತಿಭಟನೆ ದಾಖಲಿಸಿದೆ.
ಬಿಎಸ್ ಎಫ್ ಪಾಕಿಸ್ತಾನ ರೇಂಜರ್ಗಳನ್ನು ಕರೆಯಿಸಿ ತೀವ್ರ ಪ್ರತಿಭಟನೆ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಚೇತ್ಗಢ್ನ ಬಾರ್ಡರ್ ಔಟ್ಪೋಸ್ಟ್ ಆಕ್ಟ್ರಾಯ್ನಲ್ಲಿ ಇಂದು ಒಂದು ಗಂಟೆಯ ಕಾಲ ನಡೆದ ಕಮಾಂಡರ್ ಮಟ್ಟದ ಸಭೆಯಲ್ಲಿ ಪ್ರತಿಭಟನೆಯನ್ನು ದಾಖಲಿಸಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
