ಉದಯವಾಹಿನಿ, ನವದೆಹಲಿ: ಭಯೋತ್ಪಾದನೆ ಜಗತ್ತಿನ ಇತರ ದೇಶಗಳ ಮೇಲೆ ಪರಿಣಾಮ ಬೀರಿದಾಗ ಅದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಭಾರತಕ್ಕೆ ವಿಶ್ವಾಸಾರ್ಹತೆ ಇರುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ಭಯೋತ್ಪಾದಕ ದಾಳಿಗೆ ಹಮಾಸ್ ನಡೆಯನ್ನು ಖಂಡಿಸಿ ಕಾರಣ ಭಾರತ ಇಸ್ರೇಲ್‌ನಲ್ಲಿ ಕದನ ವಿರಾಮದ ಬಗ್ಗೆ ವಿಶ್ವಸಂಸ್ಥೆಯ ಮತದಾನದಿಂದ ದೂರ ಉಳಿದಿತ್ತು, ಈ ಕುರಿತು ಹೇಳಿಕೆ ನೀಡಿರುವ ಅವರು ಭಯೋತ್ಪಾದನೆ ವಿಷಯದಲ್ಲಿ ಭಾರತ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಭಯೋತ್ಪಾದನೆಯ ದೊಡ್ಡ ಬಲಿಪಶುಗಳಾಗಿದ್ದೇವೆ. ಭಯೋತ್ಪಾದನೆ ನಮ್ಮ ಮೇಲೆ ಪರಿಣಾಮ ಬೀರಿದಾಗ ಅದು ತುಂಬಾ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದಿದ್ಧಾರೆ.
ಭಯೋತ್ಪಾದನೆ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ನಮಗೆ ಯಾವುದೇ ವಿಶ್ವಾಸಾರ್ಹತೆ ಇರುವುದಿಲ್ಲ. ಹೀಗಾಗಿ ನಾವು ವಿಶ್ವಸಂಸ್ಥೆಯ ಮತದಾನದಿಂದ ದೂರ ಉಳಿದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮತದಾನದಲ್ಲಿ, ಹಮಾಸ್ ಅನ್ನು ಖಂಡಿಸುವ ವಿಷಯ ಸೇರಿಸಲು ನಿರ್ಣ ತಿದ್ದುಪಡಿ ಮಾಡುವ ಕೆನಡಾದ ಪ್ರಸ್ತಾಪವನ್ನು ಭಾರತ ಬೆಂಬಲಿಸಿತು. ಆದರೆ ಅದನ್ನು ಅಳವಡಿಸಿಕೊಳ್ಳದ ಕಾರಣ ಭಾರತ ಮತದಾನದಿಂದ ದೂರ ಉಳಿಯಿತು ಎಂದು ಅವರು ಹೇಳಿದ್ದಾರೆ.
