ಉದಯವಾಹಿನಿ, ಭಾವನಗರ : ದೇಶದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಮಧ್ಯೆ, ತೀವ್ರ ಕೋವಿಡ್-೧೯ ಸೋಂಕಿನಿಂದ ಬಳಲುತ್ತಿರುವ ಜನರು ಹೃದಯಾಘಾತದಿಂದ ದೂರವಿರಲು ಸ್ವಲ್ಪ ಸಮಯದವರೆಗೆ ಕಠಿಣ ಪರಿಶ್ರಮ ಅಥವಾ ಕಠಿಣ ವ್ಯಾಯಾಮಗಳನ್ನು ಮಾಡಬಾರದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.ಮನ್ಸುಖ್ ಮಾಂಡವಿಯಾ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಂಶೋಧನೆಯನ್ನು ಉಲ್ಲೇಖಿಸಿದ್ದಾರೆ. “Iಅಒಖ ವಿವರವಾದ ಅಧ್ಯಯನವನ್ನು ನಡೆಸಿದೆ ಮತ್ತು ತೀವ್ರವಾದ ಅಔಗಿIಆ-೧೯ ಸೋಂಕಿನಿಂದ ಬಳಲುತ್ತಿರುವ ಜನರು ಸ್ವಲ್ಪ ಸಮಯದವರೆಗೆ ಕಠಿಣ ಕೆಲಸವನ್ನು ಮಾಡಬಾರದು ಎಂದು ಕಂಡುಹಿಡಿದಿದೆ. ಇದನ್ನು ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಮುಂದೂಡಬೇಕು” ಎಂದು ಮನ್ಸುಖ್ ಮಾಂಡವಿಯಾ ಹೇಳಿದರು. ಗುಜರಾತಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವ ಪ್ರವೃತ್ತಿ ನಿಂತಿಲ್ಲ. ರಾಜ್ಯಾದ್ಯಂತ ಯುವಕರು ಮತ್ತು ಮಧ್ಯವಯಸ್ಕರು ಸಾಯುತ್ತಿದ್ದಾರೆ. ಸೌರಾಷ್ಟ್ರದಲ್ಲಿ ಹೃದಯಾಘಾತ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.
