ಉದಯವಾಹಿನಿ, ಚಿತ್ತಾಪುರ: ತಾಲೂಕಿನ ಭೀಮನಳ್ಳಿ ಗ್ರಾಮ ಪಂಚಾಯತಿಯಲ್ಲಿ 2023-24ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಸಾಮಗ್ರಿ ಖರೀದಿ ಮಾಡದೇ, ಯಾವುದೇ ಕಾಮಗಾರಿ ಕೈಗೊಳ್ಳದೇ ರೂ.9,87,359 ಹಣವನ್ನು ದುರುಪಯೋಗಪಡಿಸಿಕೊಂಡು ಸರಕಾರದ ಅನುದಾನವನ್ನು ಲೂಟಿ ಮಾಡಿದ ಪಂಚಾಯತ ಅಭಿವೃದ್ದಿ ಅಧಿಕಾರಿ ಮತ್ತು ಅಧ್ಯಕ್ಷರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಈ ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಗ್ರಾಮ ಪಂಚಾಯತ ಸದಸ್ಯರಾದ ಅಯ್ಯಪ್ಪ ಪವಾರ, ಪ್ರೇಮಕುಮಾರ ದೊಡ್ಡಮನಿ ಅವರು ಒತ್ತಾಯಿಸಿದರು.
ಪಟ್ಟಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮನಳ್ಳಿ ಗ್ರಾಮ ಅಧ್ಯಕ್ಷೆ ಘಮಲಿಬಾಯಿ ರಾವುಜಿ, ಪಿಡಿಒ ಅನೀಲಕುಮಾರ ಇವರಿಬ್ಬರೂ ಸೇರಿಕೊಂಡು 15ನೇ ಹಣಕಾಸು ಯೋಜನೆಯಡಿ ಯಾವುದೇ ಕ್ರೀಯಾಯೋಜನೆ ತಯ್ಯಾರಿಸದೇ, ಪಂಚಾಯತಿಯ ಯಾವುದೇ ಸಭೆಯನ್ನು ಕರೆಯದೇ ಪಂಚಾಯತಿಯ ಯಾವೊಬ್ಬ ಸದಸ್ಯರ ಗಮನಕ್ಕೆ ತರದೇ ಕ್ರೀಯಾಯೋಜನೆಯನ್ನು ಗಾಳಿಗೆ ತೂರಿ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999 ಹಾಗೂ ನಿಯಮಗಳು 2000 ಕಲಂ 4(2) ರ ಅಡಿಯಲ್ಲಿ ಹಾಗೂ ಹಣಕಾಸು ಇಲಾಖೆಯ ನಿರ್ದೇಶನದಂತೆ ರೂ.1 ಲಕ್ಷಕ್ಕೂ ಮೇಲ್ಪಟ್ಟ ಸಾಮಾನುಗಳ ಖರೀದಿಗೆ ಇ ಟೆಂಡರ್ ಕರೆಯಬೇಕೆಂದು ಉಲ್ಲೇಖಿಸಲಾಗಿದೆ.
