ಉದಯವಾಹಿನಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಹಿರೆ ಸೊಬಟಿ ಗ್ರಾಮದ ಕೆಚ್ಚನ ಬಂಡಿ ನಿಂಗಮ್ಮ (80) ವರ್ಷ ನಿಧನರಾಗಿರುತ್ತಾರೆ . ಇವರ ಅಂತ್ಯಕ್ರಿಯೆ ಈ ದಿನ ಸ್ವಗ್ರಾಮ ಸೊಬಟಿಯಲ್ಲಿ ನೆರವೇರಿತು ಇವರಿಗೆ ಒಬ್ಬ ಪುತ್ರಿ ಒಬ್ಬ ಪುತ್ರ ಹಾಗೂ ಮೊಮ್ಮಕ್ಕಳು ಅಪಾರ ಬಂಧುಗಳು ಇದ್ದಾರೆ. ನಿಂಗಮ್ಮ ಇವರು ಸಾವಿನಲ್ಲು ಸಾರ್ಥಕತೆ ಮೆರೆದು ತನ್ನ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಇಬ್ಬರು ಅಂದರಿಗೆ ಬೆಳಕಾಗಿದ್ದಾರೆ. ಅಂಗಾಂಗ ದಾನ ಮಾಡಿರುವ ನಿಂಗಮ್ಮ ಇವರ ಕಣ್ಣುಗಳನ್ನು ಬಳ್ಳಾರಿಯ ವಿಮ್ಸ್ ವೈದ್ಯರು ಪಡೆದುಕೊಂಡಿದ್ದಾರೆ
