ಉದಯವಾಹಿನಿ, ಬೆಂಗಳೂರು: “ಸಿಎಂ ಪದವಿ ಬಗ್ಗೆ ಇನ್ಮುಂದೆ ನಾನು ಉತ್ತರ ಕೊಡಲ್ಲ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.ಸದಾಶಿವನಗರದಲ್ಲಿ ಮಾತನಾಡಿ, “ಸಿಎಂ ಪದವಿ ವಿಚಾರವಾಗಿ ನನಗೆ ದಯಮಾಡಿ ಪ್ರಶ್ನೆ ಕೇಳಬೇಡಿ. ಯಾವುದಕ್ಕೂ ಉತ್ತರ ಕೊಡುವುದಿಲ್ಲ. ಎಷ್ಟು ಸರಿ ಹೇಳಬೇಕು, ನನ್ನ ಹೆಸರು ಹೇಳುತ್ತಿರುತ್ತಾರೆ. ನನ್ನ ಹೆಸರು ಹೇಳಿದರೆ ಏನು ಮಾಡೋಕೆ ಆಗುತ್ತೆ. ನನ್ನ ಬಗ್ಗೆ ಮಾತಾಡಬೇಡಿ ಎಂದು ಹೇಳುತ್ತೇನೆ, ಆದರೂ ಮಾತನಾಡುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸಿಎಂ, ಡಿಸಿಎಂ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಲು ಕರೆದಿದ್ದಾರೆ. ಅದನ್ನು ಬಿಟ್ಟು ಬೇರೆ ಅಜೆಂಡಾ ಇದ್ದಂತಿಲ್ಲ. ನಿಗದಿತ ಸಮಯದಲ್ಲಿ ಜಿಲ್ಲೆಗಳಲ್ಲಿ ಸಭೆ ಮಾಡಬೇಕು. ನನಗೆ ಬೆಂಗಳೂರು ಉತ್ತರಕ್ಕೆ ಹಾಕಿದ್ದಾರೆ. ನಾನು ಇನ್ನೂ ಸಭೆ ಮಾಡಿಲ್ಲ. ದಿನಾಂಕ ನಿಗದಿ ಮಾಡಿಕೊಂಡು ಸಭೆ ಮಾಡ್ತೇವೆ. ನಮಗೆಲ್ಲ ಸಮಯ ಕೊಟ್ಟಿದ್ದಾರೆ. ಅಷ್ಟರಲ್ಲಿ ಕೆಲಸ ಮಾಡ್ತೇವೆ” ಎಂದರು.
