ಉದಯವಾಹಿನಿ, ಕೋಲಾರ: ಮನಂ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿರುವ ‘೧೯೭೯’ ಚಲನಚಿತ್ರಕ್ಕೆ ಕೋಲಾರದ ನಚಿಕೇತ ನಿಲಯ ಆವರಣದಲ್ಲಿರುವ ಬುದ್ಧ ಮಂದಿರದಲ್ಲಿ ಚಾಲನೆ ನೀಡಲಾಯಿತು. ಸಾಹಿತಿ ಕವಿ ಲೇಖಕ ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಕ್ಯಾಮೆರಾ ಆನ್ ಮಾಡುವ ಮೂಲಕ ಚಲನಚಿತ್ರದ ಮುಹೂರ್ತ ದೃಶ್ಯ ಚಿತ್ರೀಕರಿಸಲು ಚಾಲನೆ ನೀಡಿ ಇತಿಹಾಸದಲ್ಲಿ ಹೇಳದ ಕಥೆಯನ್ನು ಹೇಳಲು ಹೊರಟಿಸಿರುವ ಚಿತ್ರ ತಂಡಕ್ಕೆ ಶುಭ ಕೋರಿದರು.
ಯುವ ನಿರ್ದೇಶಕ ನಟ ಮಹೇಶ್ ನೂತನ ಚಿತ್ರಕ್ಕೆ ಕ್ಲಾಪ್ ಮಾಡಿದರು. ಸಾಹಿತಿ ಜಾನಪದ ಗಾಯಕ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಸಿನಿಮಾ ಶೀರ್ಷಿಕೆಯನ್ನು ಅನಾವರಣ ಮಾಡಿದರು.
