ಉದಯವಾಹಿನಿ, ಬಳ್ಳಾರಿ: ವನ್ಯಮೃಗಗಳಿಗೆ ಆಶ್ರಯತಾಣ ಕಾಡು,ಅರಣ್ಯ, ಗುಡ್ಡ ಬೆಟ್ಟ,ಗುಹೆ.ಅಂತಹ ಎಲ್ಲಾ ಸ್ಥಳಗಳನ್ನು ತಾಲ್ಲೂಕಿನ ಮಿಂಚೇರಿ ಗುಡ್ಡದಲ್ಲಿ ಕಾಣಬಹುದು ಎಂದು ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ ಹೇಳಿದರು. ತಮ್ಮ ಶಾಲೆಯ ಮಕ್ಕಳೊಂದಿಗೆ ಮಿಂಚೇರಿ ಕೆರೆ, ಮಿಂಚೇರಿ ಗುಡ್ಡ, ಬ್ರಿಟಿಷ್ ಕಾಲದ ಬಂಗಲೆ ನೋಡಲು ಹಮ್ಮಿಕೊಂಡಿದ್ದ ಒಂದು ದಿನದ ಶೈಕ್ಷಣಿಕ ಸ್ಥಳ ದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಾಲುನಡೆಗೆಯಲ್ಲೇ ಮಿಂಚೇರಿ ಗುಡ್ಡ ಹತ್ತಿದ್ದು ಹೊಸ ಅನುಭವ ನೀಡಿತು. ಅಲ್ಲದೆ ಮಿಂಚೇರಿ ಗುಡ್ಡ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾರ್ಪಡುತ್ತಿದೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.ಜಿಲ್ಲಾಡಳಿತ ಬೇಗನೆ ಕಾಂಕ್ರಿಟ್ ರಸ್ತೆ ಹಾಕಿಸಿದರೆ ಪ್ರವಾಸಿಗರಿಗೆ ತುಂಬಾ ಅನುಕೂಲವಾಗುತ್ತದೆ.
ಶೈಕ್ಷಣಿಕ ಪ್ರವಾಸದ ನೆನಪಿಗಾಗಿ ಮಕ್ಕಳೊಂದಿಗೆ ಸೇರಿ ಗಿಡಗಳನ್ನು ನೆಡುತ್ತಿದ್ದೇವೆ ಎಂದು ಹೇಳಿದರು. ಪಾರೆಸ್ಟ್ ಬೀಟ್ ಅಧಿಕಾರ ಎಸ್. ರಾಜಶೇಖರ್ ಹಾಗೂ ಅರಣ್ಯ ಇಲಾಖೆಯ ಕಾರ್ಮಿಕರು ಉಪಸ್ಥಿತರಿದ್ದರು.
