ಉದಯವಾಹಿನಿ, ಕೋಲಾರ : ನಾವು ಭಾರತೀಯ ಜೀವನ ಶೈಲಿಯನ್ನು ಮರೆತು , ವಿದೇಶಿ ಜೀವನ ಶೈಲಿಯನ್ನು ಪಾಲಿಸುತ್ತಿರುವುದರಿಂದ ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮಕಾರಿ ಬೀರುತ್ತಿದೆ ಎಂದು ಜೀವ ಸಂಜೀವನಿ ನಾಚ್ಯರಲ್ ಲೈಫ್‌ನ ಸಂಸ್ಥಾಪಕರಾದ ಡಾ ,ರಾಜಶೇಖರ್ ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ನಗರದ ಸ್ಕೌಟ್ ಭವನದಲ್ಲಿ ಅಂಗನವಾಡಿ ಶಿಕ್ಷಕಿಯರಿಗೆ ಆಯೋಜನೆ ಮಾಡಿದ ಬನ್ನಿಸ್ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ ಇಂದಿನ ಮಕ್ಕಳ ಭವಿಷ್ಯದ ಜೀವನ ಉತ್ತಮವಾಗುವಲ್ಲಿ ಪೋಷಕರ ಹಾಗೂ ಶಿಕ್ಷಕರ ಜೀವನ ಶೈಲಿ ಮಹತ್ವದ ಪಾತ್ರ ವಹಿಸಲಿದೆ, ಮಕ್ಕಳು ಅನುಕರಣೆ ಮಾಡುತ್ತಾ ನಮ್ಮ ನಡೆ ನುಡಿ ಆಹಾರವನ್ನು ಅನುಸರಿಸುವುದರಿಂದ ನಾವು ಅವರುಗಳಿಗೆ ಮಾದರಿಯಾಗ ಕಾಣಬೇಕು ಆಗ ಮಾತ್ರ ನಮ್ಮ ಆರೋಗ್ಯ ಸುಧಾರಣೆ ಸಾಧ್ಯ ಎಂದು ಹೇಳಿದರು,
ಆಹಾರದಲ್ಲಿ ಹೆಚ್ಚು ಹಸಿರು ಸೋಪ್ಪು , ಹಣ್ಣು ಮತ್ತು ತರಕಾರಿಗಳನ್ನು ಬಳಸುವ ಮೂಲಕ ನಮ್ಮ ಆರೋಗ್ಯ ಉತ್ತಮ ಮಟ್ಟದಲ್ಲಿ ಉಳಿಯಲಿದೆ. ಅಂಗನವಾಡಿ ಶಾಲೆಗಳ ವ್ಯಾಪ್ತಿಗೆ ಪುಟ್ಟ ಮಕ್ಕಳು ಮತ್ತು ತಾಯಂದಿರುಗಳು ಸದಾ ಸಂಪರ್ಕದಲ್ಲಿರುತ್ತಾರೆ ಆದ್ದರಿಂದ ತಾವು ಉತ್ತಮ ಸಲಹೆಗಳನ್ನು ಸಕಾಲಕ್ಕೆ ನೀಡುವ ಶಕ್ತಿಯನ್ನು ಸಾಧಿಸಬೇಕು ಎಂದರು.
