ಉದಯವಾಹಿನಿ,ನವದೆಹಲಿ : ನಮ್ಮ ಹೃದಯವನ್ನು ಕರಗಿಸುವ ಅನೇಕ ಅದ್ಭುತ ವೀಡಿಯೊಗಳು ಅಂತರ್ಜಾಲದಲ್ಲಿವೆ.ಈಗ, ಇಂತಹುದೇ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ ತಾಯಿ ನಾಯಿಯೊಂದು ಮನುಷ್ಯನಿಗೆ ಧನ್ಯವಾದ ಹೇಳುವ ದೃಶ್ಯವೊಂದು ಖಂಡಿತವಾಗಿಯೂ ಅನೇಕ ಜನರನ್ನು ಭಾವುಕರನ್ನಾಗಿಸಿದೆ. ಜಾಲತಾಣದಲ್ಲಿ ಎಕ್ಸ್ ಪುಟವು ಸಾಮಾನ್ಯವಾಗಿ ಪ್ರಾಣಿಗಳಿಗೆ ಸಂಬಂಧಿಸಿದ ಅನೇಕ ವೀಡಿಯೊಗಳನ್ನು ಹಂಚಿಕೊಳ್ಳುತ್ತದೆ.
ಇತ್ತೀಚಿನ , ದೃಶ್ಯದಲ್ಲಿ ವಯಸ್ಸಾದ ಮಹಿಳೆಯೊಬ್ಬರು ನಾಯಿಮರಿಗಳಿಗೆ ಆಹಾರವನ್ನು ನೀಡುತ್ತಿರುವುದನ್ನು ಕಾಣುತ್ತದೆ.ತಾಯಿ ನಾಯಿಯು ಮಹಿಳೆಯನ್ನು ನೋಡಿದ ತಕ್ಷಣ, ಅವಳ ಬಳಿಗೆ ನಡೆದು ಮಹಿಳೆಯ ಕೈಗೆ ತನ್ನ ಕೈಗಳನ್ನು ತಾಕಿಸುವ ಮೂಲಕ ತನ್ನ ಮರಿಗಳಿಗೆ ಆಹಾರ ನೀಡಿದ್ದಕ್ಕೆ ತನ್ನ ಕೃತಜ್ಞತೆಯನ್ನು ತೋರಿಸಲು ಪ್ರಯತ್ನಿಸಿದೆ. ಪ್ರತಿಯಾಗಿ ಮಹಿಳೆ ನಾಯಿಯ ಮೈ ಸವರಿ ತಮ್ಮ ಪ್ರೀತಿಯನ್ನು ತೋರಿದ್ದಾರೆ.ತಾಯಿ ನಾಯಿ ತನ್ನ ನಾಯಿಮರಿಗಳಿಗೆ ಆಹಾರ ನೀಡಿದ್ದಕ್ಕಾಗಿ ಈ ಮಹಿಳೆಗೆ ಧನ್ಯವಾದಗಳು ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಈ ಪೋಸ್ಟ್ ಅನ್ನು ನವೆಂಬರ್ ೩ ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ ಇದು ಏಳು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.ಶೇರ್‌ಗೆ ಸಾಕಷ್ಟು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಕೂಡ ಬಂದಿವೆ.ಒಬ್ಬ ವ್ಯಕ್ತಿ ಬರೆದಿದ್ದಾರೆ, ನಾಯಿ ಮಹಿಳೆಗೆ ತುಂಬಾ ಕೃತಜ್ಞನಾಗಿದ್ದಾನೆ, ದೃಶ್ಯ ತುಂಬಾ ಮುದ್ದಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಯಿಗಳು ಈ ರೀತಿ ಭಾವನೆಗಳನ್ನು ವ್ಯಕ್ತಪಡಿಸಬಲ್ಲವು ಎಂದು ನನಗೆ ತಿಳಿದಿರಲಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ ಇದು ನನಗೆ ಅಳುವಂತೆ ಮಾಡಿದೆ ಎಂದು ಅನೇಕರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!