ಉದಯವಾಹಿನಿ, ಕುದೂರು: ಪಟ್ಟಣ ಸೇರಿದಂತೆ ಹೋಬಳಿ ವಿವಿಧೆಡೆ ಬುಧವಾರ ಉತ್ತಮ ಮಳೆ ಸುರಿಯಿತು. ಬಿಸಿಲಿನ ತಾಪದಿಂದ ಕಾದ ಭೂಮಿಗೆ ಮಳೆ ತಂಪೆರೆಯಿತು. ರೈತಾಪಿ ರ‍್ಗದ ಮೊಗದಲ್ಲಿ ಸಂತಸ ಮೂಡಿಸಿದೆ. ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ರೈತರು ಎದುರಿಸುತ್ತಿದ್ದ ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಕ್ಕಂತಾಗಿದೆ.
ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಸಂರ‍್ಭದಲ್ಲಿ ಬಾರದ ಕಾರಣ ಬಿತ್ತಿದ್ದ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಕೈಸೇರಿಲ್ಲ. ಕಳೆದ ಒಂದೂವರೆ ತಿಂಗಳಿನಿಂದಲೂ ಮಳೆಯಾಗದ ಕಾರಣ ರೈತರು ಕಂಗಾಲುಗೊಂಡಿದ್ದರು.
ಒಂದು ಗಂಟೆ ಕಾಲ ಸುರಿದ ಮಳೆಗೆ ಚರಂಡಿ, ರಸ್ತೆಗಳ ತುಂಬ ನೀರು ತುಂಬಿ ಹರಿಯಿತು. ಕಳೆದ ಎರಡು ದಿನಗಳಿಂದ ಹುಲಿಕಲ್, ಸುಗ್ಗನಹಳ್ಳಿ, ಮರೂರು, ನಾರಸಂದ್ರ, ಶ್ರೀಗಿರಿಪುರ, ಬಿಸ್ಕೂರು ಭಾಗಗಳಲ್ಲಿ ಮಳೆ ಸುರಿಯುತ್ತಿದೆ.
