
ಉದಯವಾಹಿನಿ,ಇಂಡಿ :ತಾಲೂಕಿನ ತಾಂಬಾ ಗ್ರಾಮದ ಸರಕಾರಿ ಆಸ್ಪತ್ರೆ ಉತ್ತಮವಾದ ಕಟ್ಟಡ ಹೊಂದಿದೆ. ಸರಕಾರ ಲಕ್ಷಾಂತರ ರೂ ಖರ್ಚು ಮಾಡಿ ಜನರಿಗೆ ಆರೋಗ್ಯ ಸಿಗಲೆಂದು ಖರ್ಚು ಮಾಡಿದೆ. ದುಡಿಯುವ ವರ್ಗ ಇದೆ. ಸಿಬ್ಬಂದಿ ಇದೆ. ಆದರೆ ವೈದ್ಯರು ಮಾತ್ರ ಇಲ್ಲ. ಕಳೆದ ಒಂದು ವರ್ಷದಿಂದ ವೈದ್ಯರಿಲ್ಲದೆ ಧೂಳು ತಿನ್ನುತ್ತಿದೆ.ಇಲ್ಲಿ ಎರಡು ವೈದ್ಯರ ಹುದ್ದೆ ಮಂಜುರಾತಿ ಇದೆ. ಒಂದು ಹುದ್ದೆ ಎಂ.ಬಿ.ಬಿ.ಎಸ್ ಮತ್ತೊಂದು ಬಿ.ಎ.ಎಂ.ಎಸ್. ತಾಂಬಾ ಗ್ರಾಮ ಇಂಡಿ ತಾಲೂಕಿನ ಅತ್ಯಂತ ದೊಡ್ಡ ಗ್ರಾಮ. ಇಲ್ಲಿ 39 ಗ್ರಾ.ಪಂ ಸದಸ್ಯರ ಗ್ರಾ.ಪಂ ಹೊಂದಿದೆ.ಇoಡಿ ತಾಲೂಕಿನ ಆರೋಗ್ಯ ಅಧಿಕಾರಿಗಳು ತಾಂಬಾ ಗ್ರಾಮ ಆಸ್ಪತ್ರೆ ಸಿಂದಗಿ ಮತಕ್ಷೇತ್ರದಲ್ಲಿ ಬರುವದೆಂದು ಮತ್ತು ಸಿಂದಗಿ ತಾಲೂಕಿನ ಆರೋಗ್ಯ ಅಧಿಕಾರಿಗಳು ಇಂಡಿ ತಾಲೂಕಿನ ಸಂಬAದಿಸಿದೆ ಎಂದು ನಿರ್ಲಕ್ಷಿಸುತ್ತಿರುವದು ಎಂದು ಜನ ಮಾತಾಡುವದು ಸಾಮಾನ್ಯವಾಗಿದೆ.
ಕಳೆದ ವರ್ಷದ ಸಿಂದಗಿ ಉಪ ಚುನಾವಣೆಯಲ್ಲಿ ತಾಂಬಾ ಆಸ್ಪತ್ರೆ ಸುಧಾರಣೆಗಾಗಿ ಗ್ರಾಮಸ್ಥರು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಗೋವಿಂದ ಕಾರಜೋಳ, ದೇವೆಗೌಡ,ಕುಮಾರಸ್ವಾಮಿ,ಸಿದ್ದರಾಮಯ್ ಯ,ಯಡೆಯೂರಪ್ಪ ಸೇರಿದಂತೆ ಎಲ್ಲ ರಾಜಕೀಯ ಧುರೀಣರಿಗೆ ವಿನಂತಿಸಿದರು. ಆದರೂ ಉಪಚುನಾವಣೆ ಮುಗಿಯಿತು. ದವಾಖಾನೆ ಮಾತ್ರ ಪ್ರಗತಿ ಕಾಣಲಿಲ್ಲ.ರಾತ್ರಿ ಹೊತ್ತಿನಲ್ಲಿ ಹೆರಿಗೆಗೆ ತಾಂಬಾ ಮತ್ತು ಸುತ್ತಲಿನ ಗ್ರಾಮಸ್ಥರು ವಿಜಯಪೂರಕ್ಕೆ ಹೋಗುವದು ಒಂದೇ ದಾರಿ. ಶ್ರೀಮಂತರು ಹೇಗಾದರೂ ಮಾಡಬಹುದು. ಬಡವರು ಏನೂ ಮಾಡಬೇಕು ಎಂಬುದು ಗ್ರಾಮಸ್ಥರು ಎಲ್ಲರಲ್ಲಿಯೂ ವಿನಂತಿಸುತ್ತಾರೆ. ಆದರೆ ಪ್ರಗತಿ ಮಾತ್ರ ಸೊನ್ನೆ.ಇಲಾಖೆ ತಾಲೂಕಿನ,ಜಿಲ್ಲೆಯ,ರಾಜ್ಯದ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಗತಿ ಕಂಡಿಲ್ಲ.ಆಸ್ಪತ್ರೆಯ ಅಂಬುಲೆನ್ಸ ೧೦೮ ಗೆ ಟಾಯರ್ ಇಲ್ಲವೆಂದು ಅದರಲ್ಲಿ ಯಾವದೇ ರೋಗಿಗಳಿಗೆ ತೆಗೆದುಕೊಂಡು ಹೋಗುವದಿಲ್ಲ. ಈಗಾಗಲೇ ತಾಂಬಾ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮಾಡಲು ಆರೋಗ್ಯ ಸಚಿವರಿಗೆ ಮತ್ತು ಸಂಬ0ದಿತ ಅಧಿಕಾರಿಗಳಿಗೆ ಶಾಸಕ ಮನಗೂಳಿಯವರು ಪತ್ರ ಬರೆದಿದ್ದಾರೆ.
ತಾಂಬಾ ಗ್ರಾಮದಲ್ಲಿ ಗುತ್ತಿ ಬಸವಣ್ಣ ನೀರಿಗಾಗಿ ೪೫೦ ದಿವಸ ಹೋರಾಟ ಮಾಡಿದ್ದೇವೆ. ಆಸ್ಪತ್ರೆಯಲ್ಲಿ ವೈದ್ಯರು ಒದಗಿಸದಿದ್ದರೆ ಹೋರಾಟ ಅನಿವಾರ್ಯ
ಮಲ್ಲಯ್ಯ ಸಾರಂಗಮಠ ಗುತ್ತಿ ಬಸವಣ್ಣ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರು ತಾಂಬಾ.
ಎಮ್ .ಬಿ.ಬಿ.ಎಸ್ ಅಥವಾ ವೈಧ್ಯಕೀಯ ಶಿಕ್ಷಣ ಹೊಂದಿದ ವಿದ್ಯಾರ್ಥಿಗಳು ಆಸಕ್ತಿ ಇದ್ದರೆ ಕೂಡಲೇ ತಾಂಬಾ ಆಸ್ಪತ್ರೆಗೆ ನೇಮಕಾತಿ ಮಾಡುತ್ತೇವೆ.
ರಾಹುಲ್ ಶಿಂಧೆ ಸಿಇಒ ವಿಜಯಪುರ
ತಾಂಬಾ ಗ್ರಾಮದ ಆಸ್ಪತ್ರೆ ಕುರಿತು ಆರೋಗ್ಯ ಸಚಿವ ಮತ್ತು ಆಯುಕ್ತ ಜೊತೆಗೆ ಮಾತನಾಡಿದ್ದು ಬರುವ ವಾರದೊಳಗೆ ಕ್ರಮ ಕೈ ಕೋಳ್ಳುವ ಭರವಸೆ ನೀಡಿದ್ದಾರೆ
ಅಶೋಕ ಮನಗೂಳಿ ಶಾಸಕರು ಸಿಂದಗಿ
