ಉದಯವಾಹಿನಿ, ಔರಾದ್ : ತಾಲೂಕಿನ ಎಕಲಾರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಬುಧವಾರ ಶಿಕ್ಷಣ ಇಲಾಖೆ ಆಯುಕ್ತ ಆಕಾಶ್ ಎಸ್. ಭೇಟಿ ನೀಡಿ ಶೈಕ್ಷಣಿಕ ಗುಣಮಟ್ಟ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿದರು.ಪ್ರೌಢಶಾಲೆ ಎಲ್ಲ ತರಗತಿಗಳ ಮಕ್ಕಳೊಂದಿಗೆ ಮಾತನಾಡಿದ ಅವರು, ಸಮಾಜ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳು ಕೇಳಿದರು. ಅಲ್ಲದೇ ಮಕ್ಕಳಿಗೆ ಭಾರತ ದೇಶದ ನಕಾಶೆ ಬಿಡಿಸುವಂತೆ ತಿಳಿಸಿದರು.ಶಾಲೆಯಲ್ಲಿನ ಶೈಕ್ಷಣಿಕ ಸೌಲಭ್ಯಗಳ ಮಾಹಿತಿ ಮುಖ್ಯ ಶಿಕ್ಷಕ ಜ್ಞಾನದೇವ ಪಾಂಚಾಳ ಅವರಿಂದ ಪಡೆದು ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿದರು. ಹಿರಿಯ ಅಧಿಕಾರಿ ಸಿ.ಎಸ್ ಮುಧೋಳ, ಬಿಇಒ ಮಕ್ಸೂದ್ ಅಹ್ಮದ್, ಬಿಆರ್‌ಸಿ ಪ್ರಕಾಶ ರಾಠೋಡ್, ಇನಾಯತಲಿ ಸೌದಾಗರ್, ಇಸಿಒ ಈಶ್ವರ ಕ್ಯಾದೆ, ಬಲಭೀಮ ಕುಲಕರ್ಣಿ, ಸಿಆರ್‌ಪಿ ಮಹಾದೇವ ಘುಳೆ, ಗಫರಖಾನ್ ಇದ್ದರು.
ಬಳಿಕ ಪ್ರಾಥಮಿಕ ಶಾಲೆಯಲ್ಲಿನ ಅಡುಗೆ ಕೋಣೆ, ಸ್ಮಾರ್ಟ್ಕ್ಲಾಸ್, ಶೌಚಾಲಯ, ಆಹಾರ ದಾಸ್ತಾನು ಕೋಣೆಗೆ ಭೇಟಿ ನೀಡಿ ಪರಿಶೀಲಿಸಿದರು. ಶಾಲೆಯ ಅಂದ ಚಂದ ಹಾಗೂ ಸ್ವಚ್ಛತೆ ಕುರಿತು ಮೇಚ್ಚುಗೆ ವ್ಯಕ್ತಪಡಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಮಕ್ಕಳಿಗೆ ಗ್ರಂಥಾಲಯ ಸಮರ್ಪಕವಾಗಿ ಬಳಸಿಕೊಳ್ಳುವಂತೆ ಪ್ರೇರೆಪಿಸಬೇಕು. ಪಠ್ಯದ ಜೊತೆ ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದರು.
ಶಿಕ್ಷಕಿ ರೂಪಾ ಕಾರ್ಯಕ್ಕೆ ಮೆಚ್ಚುಗೆ : 
ಗ್ರಾಮದ ಡಿ.ಎಡ್ ಪೂರ್ಣಗೊಳಿಸಿದ ರೂಪಾ ಶಾಲಾ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಉಚಿತ ಸೇವೆ ಸಲ್ಲಿಸುತ್ತಿರುವ ವಿಷಯ ತಿಳಿದ ಅವರು, ಶಿಕ್ಷಕಿ ರೂಪಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಯಶವಂತರಾವ, ಸೂರ್ಯಕಾಂತ ನಾಗೂರೆ, ಬಾಲಾಜಿ ಅಮರವಾಡಿ, ಅಂಕುಶ ಪಾಟೀಲ್, ಶಿವರಾಜ ಬಿರಾದಾರ್, ಸಿದ್ದಾರೆಡ್ಡಿ, ವೀರಶೆಟ್ಟಿ, ಶ್ರೀಮಂತ, ವಿಜಯಲಕ್ಷ್ಮಿ, ಸಿದ್ದೇಶ್ವರಿ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *

error: Content is protected !!