ಉದಯವಾಹಿನಿ, ಕೊಡಗು: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕ್ಷಣಗನನೆ ಆರಂಭವಾಗಿದ್ದು, ಜನವರಿ 22ರಂದು ಈ ಐತಿಹಾಸಿಕ ಕ್ಷಣಕ್ಕೆ ವಿಶ್ವವೇ ಸಾಕ್ಷಿಯಾಗಲಿದೆ. ಅಂದು ರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಅಯೋಧ್ಯೆ ರಾಮ ಮಂದಿರಕ್ಕೆ ಕಾವೇರಿ ತೀರ್ಥ ರವಾನೆ ಮಾಡಲಾಗುತ್ತಿದೆ.
ಕೊಡಗು ಜಿಲ್ಲೆಯ ತಲಕಾವೇರಿಯಿಂದ ಪವಿತ್ರ ಕಾವೇರಿ ತೀರ್ಥವನ್ನು ಸಂಗ್ರಹಿಸಲಾಗಿದ್ದು, ಅಯೋಧ್ಯೆ ರಾಮ ಮಂದಿರಕ್ಕೆ ಕಳುಹಿಸಿ ಕೊಡಲಾಗಿದೆ.ಅಖಿಲ ಭಾರತೀಯ ಸಂತ ಸಮಿತಿ, ವಿಹೆಚ್ ಪಿ ಸದಸ್ಯರಿಂದ ತಲಕಾವೇರಿಯ ಬ್ರಹಮ್ ಕುಂಡಿಕೆಯಿಂದ ತೀರ್ಥ ಸಂಗ್ರಹಿಸಿ ಅರ್ಚಕರು ಅಯೋಧ್ಯೆಗೆ ಈ ತೀರ್ಥ ರವಾನೆ ಮಾಡಿದ್ದಾರೆ.
