

ಬಾಗೇಪಲ್ಲಿ:- ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥ ಬಾಗೇಪಲ್ಲಿ ಹಾಗೂ ಚೇಳೂರು ತಾಲೂಕಿನ 112 ಕ್ಷಯರೋಗಿಗಳನ್ನು ಎಂ.ಆರ್. ಸ್ವಾಭಿಮಾನಿ ಫೌಂಡೇಷನ್ ವತಿಯಿಂದ ದತ್ತು ಸ್ವೀಕಾರ ಮಾಡುವ ಕಾರ್ಯಕ್ರಮವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಎಂ.ಆರ್. ಸ್ವಾಭಿಮಾನಿ ಫೌಂಡೇಷನ್ ಮುಖ್ಯಸ್ಥ ಮಿಥುನ್ ರೆಡ್ಡಿ ಮಾತನಾಡಿ, ನಾಡು ಕಂಡಂತಹ ದೊಡ್ಡ ವ್ಯಕ್ತಿಗಳಲ್ಲಿ ದಿವಂಗತ ಪುನೀತ್ ರಾಜ್ ಕುಮಾರ್ ಸಹ ಒಬ್ಬರಾಗಿದ್ದಾರೆ. ಅವರ ಸಮಾಜ ಸೇವೆಯನ್ನು ಪ್ರೇರಣೆಯಾಗಿಟ್ಟುಕೊಂಡು ಬಾಗೇಪಲ್ಲಿ , ಚೇಳೂರು ತಾಲ್ಲೂಕಿನಲ್ಲಿ 112 ಹಾಗೂ ಗುಡಿಬಂಡೆ ತಾಲೂಕಿನ ವ್ಯಾಪ್ತಿಯ 53 ಮಂದಿ ಕ್ಷಯರೋಗಿಗಳನ್ನು ಎಂ.ಆರ್ ಸ್ವಾಭಿಮಾನಿ ಫೌಂಡೇಷನ್ ವತಿಯಿಂದ ದತ್ತು ತೆಗೆದುಕೊಳ್ಳಲಾಗಿದೆ. ಈ ಕ್ಷಯ ರೋಗಿಗಳಿಗೂ ಸಹ ಸರ್ಕಾರದ ಮಾರ್ಗಸೂಚಿಯಂತೆ ಯಾವೆಲ್ಲಾ ಪೌಷ್ಟಿಕಾಂಶ ಆಹಾರವನ್ನು ನೀಡಲಾಗುತ್ತದೆ. ಅವರು ಗುಣಮುಖರಾಗುವವರೆಗೂ ಪ್ರತಿ ತಿಂಗಳು ಫೌಂಡೇಷನ್ ವತಿಯಿಂದ ಪುಡ್ ಕಿಟ್ ನೀಡಲಾಗುತ್ತದೆ.
ಮುಂದಿನ ದಿನಗಳಲ್ಲಿ ಅನೇಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೂ ಸಹ ನೆರವು ಮಾಡಲಾಗುತ್ತದೆ. 2025ರೊಳಗೆ ಕ್ಷಯ ರೋಗ ಮುಕ್ತ ಭಾರತ ಮಾಡಲು ಸರ್ಕಾರದ ಜೊತೆಗೆ ನಮ್ಮ ಫೌಂಡೇಷನ್ ಸಹ ಕೈ ಜೋಡಿಸಿದೆ ಎಂದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರಿಗೆ, ಪೌರ ಕಾರ್ಮಿಕರಿಗೆ ಹಾಗೂ ಕ್ಷಯ. ರೋಗಿಗಳಿಗೆ ಪುಡ್ ಕಿಟ್ ನೀಡಲಾಯಿತು. ಈ ಸಂದರ್ಭದಲ್ಲಿ ಡಾ.ಸತ್ಯನಾರಾಯಣ ರೆಡ್ಡಿ ಜಿಲ್ಲಾ ಕ್ಷಯರೋಗ ಅಧಿಕಾರಿಗಳಾದ ರಮೇಶ್ ಬಾಬು, ಎಂ.ಜಿ.ಕಿರಣ್ ಕುಮಾರ್, ವಕೀಲರಾದ ನರಸಿಂಹ ರೆಡ್ಡಿ, ಸೋಮಶೇಖರ್ ರೆಡ್ಡಿ, ಮಹೇಶ್ ಪಾತಪಾಲ್ಯ, ಮೂರ್ತಿ ಕುಂಟ್ಲಪಲ್ಲಿ. ಹರೀಶ್ ಐವಾರುಪಲ್ಲಿ , ಶ್ರೀನಿವಾಸ,ಭರತ್, ನಾಗಭೂಷಣ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.
