ಉದಯವಾಹಿನಿ, ಹಾವೇರಿ: ಜಿಲ್ಲೆಯ ತಾಲ್ಲೂಕುಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ರಸ್ತೆಗಳು ಹಾಳಾಗಿವೆ. ತೆಗ್ಗು-ಗುಂಡಿಗಳು ಹೆಚ್ಚು ಬಿದ್ದಿದ್ದು, ಇಂಥ ರಸ್ತೆಯಲ್ಲಿ ಸಂಚರಿಸಲು ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಗಳು ಹಾಳಾಗಿರುವುದಷ್ಟೇ ಅಲ್ಲದೇ, ಕಾಲುವೆಗಳಲ್ಲಿ ನೀರಿನ ಜೊತೆ ಯಲ್ಲಿ ತ್ಯಾಜ್ಯವೆಲ್ಲ ಹರಿದು ಕೆಳಸೇತುವೆ ಗಳಲ್ಲಿ ಜಮೆ ಆಗುತ್ತಿದೆ.ಇದದಿಂದ ಕೆಳಸೇತುವೆಗಳಲ್ಲಿ ತ್ಯಾಜ್ಯ ನಿಂತು ಜನರ ಓಡಾಟಕ್ಕೆ ಅಡ್ಡಿಯಾಗುತ್ತಿದೆ.ಹಾವೇರಿಯಿಂದ ಭೂ-ವೀರಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ತಗ್ಗು-ಗುಂಡಿ ಗಳು ಹೆಚ್ಚಾಗಿವೆ. ಗ್ರಾಮಸ್ಥರ ವಾಹನ ಗಳು ಹಾಗೂ ಬಸ್ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇದೇ ಭೂ ವೀರಾಪುರದಲ್ಲಿ ವಸತಿ ಶಾಲೆ ಹಾಗೂ ಮೋರಾರ್ಜಿ ದೇಸಾಯಿ ವಸತಿ ಶಾಲೆಗಳು ಇವೆ. ಇಲ್ಲಿಯ ಮಕ್ಕಳು ಹಾಗೂ ಶಿಕ್ಷಕರು, ಹಾವೇರಿಗೆ ಬಂದು ಹೋಗಲು ಇದೇ ರಸ್ತೆ ಅವಲಂಬಿಸಿದ್ದಾರೆ. ರಸ್ತೆ ಹಾಳಾಗಿ ದ್ದರಿಂದ, ಅವರೆಲ್ಲರೂ ಪರದಾಡು ತ್ತಿದ್ದಾರೆ.’ಭೂ ವೀರಾಪುರದ ರಸ್ತೆ ಹಾಳಾಗಿ ಹಲವು ವರ್ಷವಾಗಿದೆ. ಮಳೆಗಾಲ ದಲ್ಲಂತೂ ಓಡಾಡಲು ತುಂಬಾ ತೊಂದರೆ ಆಗುತ್ತಿದೆ. ರಸ್ತೆಯನ್ನು ದುರಸ್ತಿ ಮಾಡಿ ಅನುಕೂಲ ಮಾಡಿಕೊಡ ಬೇಕು’ ಎಂದು ಗ್ರಾಮದ ಪ್ರಕಾಶ ಒತ್ತಾಯಿಸಿದರು.
ಹಾವೇರಿ ತಾಲ್ಲೂಕಿನ ವರದ ಹಳ್ಳಿಯ ರಸ್ತೆಯೂ ಸಂಪೂರ್ಣ ಹಾಳಾ ಗಿದ್ದು, ಅಲ್ಲಲ್ಲಿ ನೀರು ನಿಂತುಕೊಂಡು ಜನರ ಸಂಚಾರಕ್ಕೆ ತೊಂದರೆ ಉಂಟಾ ಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿರುವ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಡಾಂಬರ್ ರಸ್ತೆ ಮಾಡಲಾಗಿದೆ.
