ಉದಯವಾಹಿನಿ, ಕಾಳಗಿ: ಪಟ್ಟಣ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ವಿಘ್ನೇಶ್ವರನ ವಿಗ್ರಗಳನ್ನು ಬುಧವಾರ ಸಾಯಂಕಾಲ ಶಾಂತಿ-ಸುವ್ಯವಸ್ಥೆಯಿಂದ ವಿಸರ್ಜನೆ ಮಾಡಲಾಯಿತು. ಸರ್ವಜನಾಂಗದ ಪ್ರಮುಖರು, ಯುವಕರು, ವಿವಿಧ ಧರ್ಮಿಯರು ಒಟ್ಟಾಗಿ ಕುಡಿಕೊಂಡು ಭಾವೈಕ್ಯತೆಯ ಸಂಕೇತವಾಗಿ ಗಣೇಶನ ಮೇರವಣಿಗೆ ಮಾಡುವ ಮೂಲಕ ಸಂಬ್ರಮದಿಂದ ಹಬ್ಬ ಆಚರಣೆ ಮಾಡಿದರು.
ಡಿ.ಜೆ.ಸಂಪೂರ್ಣ ಬಂದ್: ಯಾವೊಬ್ಬ ಮಂಡಳಿಯ ಗಣೇಶ ಪ್ರತಿಷ್ಠಾನದ ಯುವಕರು, ಮುಖಂಡರು ಡಿ.ಜೆ. ಸದ್ದುಮಾಡಿ ಪರರಿಗೆ ತೊಂದರೆ ನೀಡದೆ ಹಬ್ಬ ಆಚರಣೆ ಮಾಡಿರುವುದು ಈ ವರ್ಷ ಗಣೇಶ ಹಬ್ಬದ ವಿಶೇಷತೆಯಾಗಿತ್ತು. ಡಿಜೆ ಬದಲು, ಢೊಳ್ಳು, ಕೋಲು, ತಮಟೆ, ತುತ್ತುರಿ, ಹಲಗೆ, ಭಾಜಾ, ಭಜಂತ್ರಿಗಳಿಂದ ಕಂಗೊಳಿಸಿರುವ ಗಣೇಶ ಉತ್ಸವ ನೋಡುಗರ ಗಮನ ಸೇಳೆಯುವಂತಿತ್ತು.ಬೀಡು ಬಿಟ್ಟಿರುವ ಪಪಂ. ಸಿಬ್ಬಂಧಿಗಳು: ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪಂಕಜಾ ಎ. ಅವರ ನೇತೃತ್ವದ ಸಿಬ್ಬಂಧಿಗಳು ಪಟ್ಟಣದ ಶ್ರೀನೀಲಕಂಠ ಕಾಳೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ರೌದ್ರಾವತಿ ನದಿ ತಟದ ನೂತನ ಬ್ರೀಜ್ ಕಂ.ಬ್ಯಾರೇಜ್ ಹತ್ತಿರವೇ ಬಿಡಾರು ಹೂಡಿದ ಪಂಕಜಾ ಅವರ ತಂಡ ಯಾವ ಅನಾಹುತವಾಗದಂತೆ ಗಣೇಶನ ವಿಗ್ರಗಳನ್ನು ನದಿಗೆ ಬಿಡುವ ವ್ಯವಸ್ಥೆ ಅಚ್ಚುಕಟ್ಟಾಗಿ ನೀಭಾಯಿಸಿದರು.
