ಉದಯವಾಹಿನಿ, ಲಕ್ಷ್ಮೇಶ್ವರ : ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೇವಸ್ಥಾನ ಮತ್ತು ಮಹಿಳೆಯರ ಕೊರಳಲ್ಲಿನ ತಾಳಿ ಚೈನು ಕಳ್ಳತನ ಮಾಡಿದ ಪ್ರಕರಣಗಳ ಬೆನ್ನು ಹತ್ತಿದ್ದ ಪೊಲೀಸರು ಕೊನೆಗೂ ಭರ್ಜರಿ ಬೇಟೆಯಾಡಿ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾವೇರಿ ಜಿಲ್ಲೆಯ ಪ್ರಸಾದ್ ಅಲಿಯಾಸ್ ಗುರುರಾಜ ನಾಗರಾಜಪ್ಪ ಪ್ರದೀಪ್ ನಾಗ್ರಾಜಪ್ಪ ಶ್ರೀಕಾಂತ್ ಗುಡುಗುರ್ ಎಂಬ ಮೂರು ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸಿ ಅವರಿಂದ ಸುಮಾರು 39 ಲಕ್ಷ ರೂ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು, ಒಂದು ಸ್ಕಾರ್ಪಿಯೋ ಒಂದು ಪಲ್ಸರ್ ಮೋಟಾರ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿತರು ಶಿರಹಟ್ಟಿ ಬನ್ನಿಕೊಪ್ಪ ಒಡವಿ ಗುತ್ತಲ ತುಮ್ಮಿನಕಟ್ಟಿ ನೀರಲಗಿ ಹೊಸದುರ್ಗ ಸೇರಿದಂತೆ ಎಂಟು ದೇವಸ್ಥಾನಗಳು ಮತ್ತು ಲಕ್ಷ್ಮೇಶ್ವರ ಶಿಗ್ಲಿ ಗದಗ ಕೊಟ್ಟೂರು ಹರಪನಹಳ್ಳಿ ಆನವಟ್ಟಿ ಹೊಸದುರ್ಗ ಹೀಗೆ ಏಳು ಕಡೆ ಸರಗಳತನಗಳಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ.

ಈ ಪ್ರಕರಣ ಭೇದಿಸುವಲ್ಲಿ ಶಿರಹಟ್ಟಿ ಸಿಪಿಐ ನಾಗರಾಜ್ ಮಾಡಳ್ಳಿ ಮತ್ತು ಪಿಎಸ್‍ಐ ಈರಣ್ಣ ರಿತ್ತಿ ಅವರಿಗೆ ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ ಗದಗ್ ಉಪ ವಿಭಾಗದ ಡಿವೈಎಸ್ಪಿ ಜೆಎಚ್ ಇನಾಮದಾರ ಅವರ ಮಾರ್ಗದರ್ಶನದಲ್ಲಿ ತನಿಖೆಯನ್ನು ಕೈಗೊಳ್ಳಲಾಗಿತ್ತು.
ಪೊಲೀಸರ ಈ ಕಾರ್ಯಕ್ಕೆ ಬೆಳಗಾವಿ ವಲಯದ ಐಜಿಪಿ ಮತ್ತು ಗದಗ್ ಜಿಲ್ಲಾ ಪೊಲೀಸ್ ಅಧಿಕಾರಿಗಳು ಆದ ಬಿಎಸ್ ನೇಮಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!