ಉದಯವಾಹಿನಿ, ಮೈಸೂರು: ದಲಿತರ ಬಗ್ಗೆ ಮಾತನಾಡುವ ರಾಹುಲ್ ಗಾಂಧಿಯ ನಿಜಬಣ್ಣ ಅಮೆರಿಕಾ ನೆಲದಲ್ಲಿ ಬಯಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಹುಲ್‍ಗಾಂಧಿಯ ಹೇಳಿಕೆಯನ್ನು ಒಪೆÇ್ಪತ್ತಾರೊ, ಇಲ್ಲವೋ ಎಂಬುದನ್ನು ಕೂಡಲೇ ಬಹಿರಂಗಪಡಿಸಲಿ ಎಂದು ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಒತ್ತಾಯಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ದಲಿತರ ಉದ್ದಾರದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ಅಮೆರಿಕದಲ್ಲಿ ಮೀಸಲಾತಿ ತೆಗೆಯುವ ಮಾತನ್ನಾಡಿದ್ದಾರೆ. ಅಂದು ನೆಹರು ಸಹ ಮೀಸಲಾತಿ ವಿರೋಧಿಸಿದ್ದರು. ಇದೀಗ ರಾಹುಲ್ ಗಾಂಧಿ ತಾತನ ನಡೆ ಅನುಸರಿಸಿದ್ದಾರೆ. ಬಿಜೆಪಿ ಅನಂತಕುಮಾರ್ ಹೆಗ್ಡೆ ಸಂವಿಧಾನದ ಕುರಿತ ಹೇಳಿಕೆಗೆ ಸಮಾಜದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕರ ಈಗ ಏನು ಹೇಳುತ್ತಾರೆ? ಈ ಕುರಿತು ದಲಿತ ನಾಯಕರ ನಿಲುವೇನು? ರಾಹುಲ್ ಗಾಂಧಿ ನೀತಿ ಕಾಂಗ್ರೆಸ್ ನೀತಿಯೇ? ಪ್ರಿಯಾಂಕ ಗಾಂಧಿ ದಲಿತರ ಪರ ಇದ್ದರೆ ಕೂಡಲೆ ಈ ಕುರಿತು ಸ್ಪಷ್ಟೀಕರಣ ನೀಡಲಿ ಎಂದು ಆಗ್ರಹಿಸಿದರು.
ದಲಿತರ ಹಣ ದುರುಪಯೋಗ: ದಲಿತರಿಗೆ ಸಂಪನ್ಮೂಲ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ದಲಿತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಎಸ್ಸಿಪಿ, ಟಿಎಸ್ಪಿ 25 ಸಾವಿರ ಕೋಟಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು ಯಾರು? ಹಣ ದುರುಪಯೋಗ ಮಾಡಿಕೊಂಡವರೇ ಈ ರೀತಿಯ ಹೇಳಿಕೆ ನೀಡುವುದು ನಗೆಪಾಟಲಿನ ವಿಷಯ ಎಂದು ವ್ಯಂಗ್ಯವಾಡಿದರು.ಅಂಬೇಡ್ಕರ್ ಅವರ ಮಾರ್ಗ, ಆದರ್ಶಗಳನ್ನು ಹತ್ಯೆ ಮಾಡಿದು ಕಾಂಗ್ರೆಸ್, ಅವರನ್ನು ಹೀನಾಯವಾಗಿ ನಡೆಸಿಕೊಂಡಿತು. ಕಾಂಗ್ರೆಸ್‍ನ ಈ ದಲಿತ ವಿರೋಧಿ ನೀತಿಯನ್ನು ದೇಶಾದ್ಯಂತ ಹೋರಾಟ ಮಾಡಿ ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ. ಇಂದು ಜಾತಿಗಣತಿ ಬಗ್ಗೆ ಮಾತನಾಡುತ್ತಾರೆ. ಆದರೆ, 1948ರಲ್ಲೇ ಜಾತಿ ಗಣತಿ ಆಗುತ್ತಿತ್ತು. ಅಂದು ಜಾತಿ ಹೆಸರಿಗೆ ಕಾಂಗ್ರೆಸ್ ನಾಯಕರು ವೈಟ್ನರ್ ಹಾಕಿದ್ದರು. ಯಾರು ಆ ಕಾಣದ ಕೈ ಎಂದು ಪ್ರಶ್ನಿಸಿದರು.
ಸಿಖ್ ನರಮೇಧ ಮಾಡಿದ್ದು ಯಾರು: ಸಿಖ್ಖರ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆಯೂ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಆದರೆ, 1984ರಲ್ಲಿ ಸಿಖ್ಖರ ನರಮೇಧ ನಡೆಸಿದ್ದು ಯಾರು? ವಿದೇಶಿ ನೆಲದಲ್ಲಿ ಕುಳಿತು ಏನು ಬೇಕಾದರೂ ಹೇಳಿಕೆ ನೀಡಬಹುದು ಎಂಬ ಭ್ರಮೆಯಲ್ಲಿದ್ದರೆ ಅದು ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
