2023-24 ಶೈಕ್ಷಣಿಕ ವರ್ಷದಲ್ಲಿ ಅಧ್ಯಯನ ನಡೆಸಿದ ಅಂತಿಮ ವರ್ಷದ ಬಿ ಎ6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ರಾಣಿ ಚನ್ನಮ್ಮ ವಿ ವಿ ಯು ಫಲಿತಾಂಶವನ್ನು ಅತಿ ಶೀಘ್ರದಲ್ಲಿ ಪ್ರಕಟಿಸಿದ್ದು ಶ್ಲಾಘನೀಯವಾಗಿದೆ. ವಿ ವಿ ಕುಲಸಚಿವರಾದ ರವೀಂದ್ರನಾಥ ಎನ್ ಕದಮ್ ರವರ ಸಮಯೋಚಿತ ನಿರ್ಧಾರವು ವಿದ್ಯಾರ್ಥಿ ಬಳಗ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಅದಲ್ಲದೆ ಸದರಿ ವಿ ವಿ ಯ ಶೈಕ್ಷಣಿಕ ವರ್ಷವನ್ನು ಕರ್ಣಾಟಕ ಉಳಿದ ಎಲ್ಲ ವಿ ವಿ ಗಳ ಶೈಕ್ಷಣಿಕ ವರ್ಷಕ್ಕೆ ಸರಿದೂಗುವಂತೆ ಮಾಡಿರುವ ಪ್ರಯತ್ನವನ್ನು ಸಹ ಇಲ್ಲಿ ಕಾಣಬಹುದು. ಫಲಿತಾಂಶವನ್ನು ಯು ಯು ಸಿ ಎಂ ಎಸ್ ಪ್ರೋಟಾನ್ ನಲ್ಲಿ ಪ್ರಕಟಿಸಲಾಗಿದೆ ಸದರಿ ಫಲಿತಾಂಶವನ್ನು 10/10/24 ಸಂಜೆ 5ಘಂಟೆ ನಂತರ ಯು ಯು ಸಿ ಎಂ ಎಸ್ ಸ್ಟೂಡೆಂಟ್ ಪ್ರೋಟಲ್ ಮೂಲಕ ಪ್ರಕಟಿಸಲಾಗುವುದೆಂದು ಮಾನ್ಯ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Leave a Reply

Your email address will not be published. Required fields are marked *

error: Content is protected !!