
ಉದಯವಾಹಿನಿ, ಬಳ್ಳಾರಿ : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ವೇದಿಕೆಯಲ್ಲಿ ಬಳ್ಳಾರಿಯ ಜಾನಪದ ಕಲಾವಿದ ಜಡೇಶ್ ಎಮ್ಮಿಗನೂರು ಮತ್ತು ತಂಡದ ಜಾನಪದ ಗೀತ ಗಾಯನ ನೆರೆದಿದ್ದ ಪ್ರೇಕ್ಷಕರ ಮನರಂಜಿಸಿತು.
ಶ್ರೀಗುರು ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಭಕ್ತಿಗೀತೆಯೊಂದಿಗೆ ಪ್ರಾರಂಭವಾದ ಗಾಯನ ಉತ್ತರ ಕರ್ನಾಟಕದ ಜಾನಪದ ಗೀತೆಗಳ ಮುಖಾಂತರ ಪ್ರೇಕ್ಷಕರನ್ನು ರಂಜಿಸಿದರು, ನಂಜನಗೂಡಿನ ನಾಗರಾಜ ಗೌಡರು ವೇದಿಕೆ ಮೇಲೆ ಆಗಮಿಸಿ ಕಲಾವಿದರನ್ನು ಅಭಿನಂದಿಸಿ,ಗುಣಗಾನ ಮಾಡಿದರು.
ಜಂಬೆ ವಾದಕರಾಗಿ ಹೇಮಂತ್, ತಮಟೆ ವಾದಕರಾಗಿ ಮಹಾಂತೇಶ್ ನೆಲ್ಕುದುರೆ, ಕೊಳಲು ವಾದಕರಾಗಿ ನಾಗರಾಜ್ ಶಾವಿ ಕೊಪ್ಪಳ, ಸಹಕಲಾವಿದರಾಗಿ ಹನುಮಯ್ಯ,ವೀರೇಶ್ ದಳವಾಯಿ, ತಿರುಮಲ, ಸ್ವಯಂ ಕುಮಾರ್ ಭಾಗವಹಿಸಿದ್ದರು.
