ಉದಯವಾಹಿನಿ, ಕೆ.ಆರ್.ಪುರ: ಜನಪ್ರಿಯ ಅಸೋಸಿಯೇಷನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೆ.ಆರ್.ಪುರ ಕ್ಷೇತ್ರದ ವಿಜಿನಾಪುರದಲ್ಲಿ ಏರ್ಪಡಿಸಿದ್ದ ದುರ್ಗಾ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬೈರತಿಬಸವರಾಜ್ ಅವರು ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ಬೈರತಿಬಸವರಾಜ್ ಅವರು ದಸರಾ ಹಬ್ಬದ ಅಂಗವಾಗಿ ದುರ್ಗ ಮಾತೆಯ ಪೂಜೆಯನ್ನು ಕ್ಷೇತ್ರದ ಹಲವೆಡೆ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ಕೆ.ಆರ್.ಪುರ ಕ್ಷೇತ್ರದಲ್ಲಿ ದಸರಾ ಹಬ್ಬ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ,ದುರ್ಗಾದೇವಿ,ಗಣೇಶ ಸೇರಿದಂತೆ,ಹಲವು ದೇವರುಗಳ ಪ್ರತಿಷ್ಠಾಪನೆ ಹಾಗೂ ಮೆರವಣಿಗೆ ಕಾರ್ಯಗಳು ನಡೆಯುತ್ತಿರುವುದು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ನೀಡಲು ಸಹಾಯಕವಾಗಿದೆ ಎಂದು ನುಡಿದರು.ನಮ್ಮ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಕಾರ್ಯ ಯುವ ಪೀಳಿಗೆ ಮಾಡಬೇಕಾಗಿದ್ದು,ಇದಕ್ಕೆ ಹಿರಿಯರ ಮಾರ್ಗದರ್ಶನ ಅವಶ್ಯಕವಾಗಿದೆ ಎಂದು ವಿವರಣೆ ನೀಡಿದರು. ಮಾತನಾಡಿದ ವಿಜಿನಾಪುರ ವಾರ್ಡನ ಬಿಜೆಪಿ ಮುಖಂಡರಾದ ಪ್ರದೀಪ್ ಗೌಡ ಅವರು ಕಳೆದ ೧೬ ವರ್ಷಗಳಿಂದ ದುರ್ಗಾದೇವಿ ಪ್ರತಿಷ್ಠಾಪನೆ ಮಾಡಿ ಪೂಜೆ ನೇರವೇರಿಸಲಾಗುತ್ತಿದ್ದು,ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದೆವೆ ಎಂದು ನುಡಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಪ್ರದೀಪ್ ಗೌಡ,ಎಂಎಲ್ ಡಿಸಿ ಮುನಿರಾಜು,ನಾಗರಾಜ,ಸಂಜಯ್ ಸಿನ್ಹಾ ಇದ್ದರು.

Leave a Reply

Your email address will not be published. Required fields are marked *

error: Content is protected !!