ಉದಯವಾಹಿನಿ, ದಾವಣಗೆರೆ : ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಿರೇಮೇಗಳಗೆರೆ ಗ್ರಾಮದಲ್ಲಿ ನಡೆದ ದಸರಾ ಉತ್ಸವದಲ್ಲಿ 8ನೇ ದಿನದಂದು *ಚಿರಂತನ* ತಂಡದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.ಸುಮಾರು ಎರಡುವರೆ ಗಂಟೆಗಳ ಕಾಲ ಮಹಿಷಾ ಮರ್ದಿನಿ ನೃತ್ಯ ರೂಪಕ, ಜಾನಪದ ನೃತ್ಯಗಳು,ಸಮಕಾಲಿನ ನೃತ್ಯಗಳನ್ನು ಚಿರಂತನದ ಕಲಾವಿದೆಯರ ತಂಡವು ಪ್ರದರ್ಶಿಸಿತು. ಬ್ರಹ್ಮ ವಿಷ್ಣು ಮಹೇಶ್ವರರಿಂದ ವರ ಪಡೆದು ರೂಪವನ್ನು ಧರಿಸಿದ ದುರ್ಗಾದೇವಿಯು ಮಹಿಷನನ್ನು ಕೊಂದ ಬಗ್ಗೆ ಹಾಗೂ ನವರಾತ್ರಿಯ ಆಚರಣೆಯ ವಿಶೇಷತೆಯ ಬಗ್ಗೆ ನೃತ್ಯ ರೂಪಕದ ಮುಖಾಂತರ ಬಿಂಬಿಸಿ ಪ್ರಸ್ತುತಪಡಿಸಲಾಯಿತು.

Leave a Reply

Your email address will not be published. Required fields are marked *

error: Content is protected !!