ಉದಯವಾಹಿನಿ, ನವದೆಹಲಿ: ಭಾರತೀಯ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಈ ದಿನ ಎಂದೆಗೂ ಮರೆಯಲು ಆಗದ ಕ್ಷಣವಾಗಿದೆ. ಹೊಸ ಸಂಸತ್ ಭವನ ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿಯಾಗಿ ಉದ್ಘಾಟನೆ ಆಗಿದೆ. ಈ ಕ್ಷಣಕ್ಕೆ ಶತಕೋಟಿ ಭಾರತೀಯರು ಸಾಕ್ಷಿಯಾಗಿದ್ದು, ಪ್ರಧಾನಿ ಮೋದಿ ನೂತನ ಸಂಸತ್ ಭವನದಲ್ಲಿ ತಮ್ಮ ಮೊದಲನೇ ಭಾಷಣ ಮಾಡುತ್ತಾ ವಿಶ್ವಗುರು ಬಸವಣ್ಣ ಅವರ ಅನುಭವ ಮಂಟಪ ನೆನಪು ಮಾಡಿಕೊಂಡಿದ್ದಾರೆ.ಭಾರತಕ್ಕೆ ಸ್ವಾತಂತ್ರ್ಯ ಅಸಂಖ್ಯಾತ ಜನರ ತ್ಯಾಗ ಮತ್ತು ಬಲಿದಾನದಿಂದ ಸಿಕ್ಕಿದೆ. ಭಾರತದ ಪ್ರಗತಿಗೆ ಅಸಂಖ್ಯಾತ ಮಹನೀಯರು ಶ್ರಮಿಸಿದ್ದಾರೆ. ಭಾರತದ ವಿಕಾಸ ಯಾತ್ರೆಗೆ ಹೊಸ ಸಂಸತ್ ಭವನ ಸಾಕ್ಷಿಯಾಗಿದೆ. ಸರ್ವ ಧರ್ಮ ಪ್ರಾರ್ಥನೆಯಿಂದ ಸಂಸತ್ ಭವನ ನಿರ್ಮಾಣವಾಗಿದೆ. ನೂತನ ಸಂಸತ್ ಭವನ ಪ್ರಜಾಪ್ರಭುತ್ವದ ಮಂದಿರವಾಗಿದೆ ಎಂದು ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜೊತೆಗೆ ಕನ್ನಡ ನಾಡಿನ ಹೆಮ್ಮೆಯ ಪುತ್ರ ಬಸವಣ್ಣರ ಅನುಭವ ಮಂಟಪದ ನೆನಪು ಮಾಡಿಕೊಂಡಿದ್ದಾರೆ ಪ್ರಧಾನಿ.ಹೌದು ಪ್ರಧಾನಿ ಮೋದಿ ನೂತನ ಸಂಸತ್ ಭವನದಲ್ಲಿ ತಮ್ಮ ಮೊದಲ ಭಾಷಣದ ಸಂದರ್ಭದಲ್ಲಿ ಭಾರತದ ಏಕತೆಯನ್ನ ಪ್ರತಿಪಾದಿಸಿದರು. ಹೊಸ ಸಂಸತ್ ಭವನ ಕಟ್ಟಲು ವಸ್ತುಗಳನ್ನ ಎಲ್ಲೆಲ್ಲಿಂದ ತಂದಿದ್ದೇವೆ ಎಂಬ ವಿಚಾರವನ್ನ ತಿಳಿಸಿದ ಪ್ರಧಾನಿ ಮೋದಿ, ದೇಶದ ವಿವಿಧ ರಾಜ್ಯಗಳಿಂದ ದೇಶದ ಸಂಸತ್ ಭವನ ನಿರ್ಮಾಣಕ್ಕೆ ಸಿಕ್ಕ ಕೊಡುಗೆ ನೆನಪು ಮಾಡಿಕೊಂಡರು. ಹಾಗೇ ಇದೇ ಸಂದರ್ಭದಲ್ಲಿ ಒಂದು ಭಾರತ.. ಶ್ರೇಷ್ಠ ಭಾರತ..! ಎನ್ನುವ ಮೂಲಕ ಭಾರತದ ಏಕತೆಯನ್ನ ಪ್ರತಿಪಾದಿಸಿದರು.ಹಾಗೇ ನೂತನ ಸಂಸತ್ ಭವನದಲ್ಲಿ ಸೆಂಗೋಲ್ ಸ್ಥಾಪನೆ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯ ಮಾತು ಆಡಿದರು. ಆತ್ಮ ನಿರ್ಭರ್ ಭಾರತ್ ಯೋಜನೆಗೆ ಇದು ಸಾಕ್ಷಿ. ಭಾರತೀಯರ ಸಂಕಲ್ಪದ ಪ್ರತೀಕವಾಗಿ ಈ ಸಂಸತ್ ಭವನ ನಿರ್ಮಾಣವಾಗಿದೆ. ಭಾರತೀಯರ ಗೌರವ ಮತ್ತಷ್ಟು ಹೆಚ್ಚಲಿದೆ. ಬ್ರಿಟೀಷರು ದೇಶಕ್ಕೆ ಸ್ವಾತಂತ್ರ್ಯ ನೀಡಿದರು. ಅಧಿಕಾರ ಹಸ್ತಾಂತರಕ್ಕೆ ಸಾಕ್ಷಿಯಾಗಿ ಸೆಂಗೋಲ್ ನೀಡಿದ್ದರು. ಸೆಂಗೋಲ್ ನಾವು ಮಾಡಬೇಕಾದ ಕರ್ತವ್ಯ ನೆನಪಿಸುತ್ತೆ. ಸೆಂಗೋಲ್ ನಮ್ಮೆಲ್ಲರಿಗೂ ಪ್ರೇರಣೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.ನೂತನ ಸಂಸತ್ ಭವನ ನಿರ್ಮಾಣದ ಹಿಂದೆ ಸಾಕಷ್ಟು ಕಾರ್ಮಿಕರ ಪರಿಶ್ರಮವಿದೆ. 9 ವರ್ಷಗಳಲ್ಲಿ 9 ಹೊಸ ನಿರ್ಮಾಣದ ಕಲ್ಯಾಣವಾಗಿದೆ. 9 ವರ್ಷಗಳಲ್ಲಿ ಬಡವರಿಗಾಗಿ 4 ಕೋಟಿ ಮನೆ ನಿರ್ಮಾಣವಾಗಿವೆ. 13 ಕೋಟಿ ಶೌಚಾಲಯ ನಿರ್ಮಾಣವಾಗಿದೆ ಹಾಗೂ ನೀರು ಸಂರಕ್ಷಣೆಗೆ 50 ಸಾವಿರಕ್ಕೂ ಹೆಚ್ಚು ಅಮೃತ ಸರೋವರ ನಿರ್ಮಾಣ ಮಾಡಿರುವುದು ಬಹಳ ಸಂಸತ ತಂದಿದೆ. ದೇಶದ ಅಭಿವೃದ್ಧಿಯೇ ಈ ದೇಶದ ಜನರ ಅಭಿವೃದ್ಧಿ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.
