ಉದಯವಾಹಿನಿ, ಬೆಂಗಳೂರು: ಗೊಂಬೆನಾಡಿನ ಬುದ್ಧಿವಂತ ಮತದಾರರೇ ಜಾಗೃತರಾಗಿ, ಕುತಂತ್ರಿಗಳ ಬಣ್ಣದ ಮಾತಿಗೆ ಮರುಳಾಗದಿರಿ ಎಂದು ಜೆಡಿಎಸ್‌‍ ಕರೆ ನೀಡಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಚನ್ನಪಟ್ಟಣ ಕ್ಷೇತ್ರವು ಈಗಾಗಲೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಸಾಕಷ್ಟು ಅಭಿ ವೃದ್ಧಿಯಾಗಿದೆ ಎಂದು ಸಮರ್ಥಿಸಿಕೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಸಂಸದ ಡಿ.ಕೆ.ಸುರೇಶ್‌ ಸಹೋದರರು ಕನಕಪುರವನ್ನು ಕಲ್ಲಿನಪುರ ಮಾಡಿ ಬಂಡೆಕಲ್ಲುಗಳನ್ನು ಖಾಲಿ ಮಾಡಿದ್ದಾಗಿದೆ ಎಂದು ಟೀಕಿಸಿದೆ.ಈಗ ಚನ್ನಪಟ್ಟಣವನ್ನು ಚಿನ್ನದಪಟ್ಟಣ ಮಾಡುತ್ತೇನೆ ಎಂದು ಹೇಳಿಕೊಂಡು, ಏನನ್ನು ದೋಚಲು ಬರುತ್ತಿದ್ದೀರಿ ಎಂದು ಜೆಡಿಎಸ್‌‍ ಆರೋಪಿಸಿದೆ.

 

Leave a Reply

Your email address will not be published. Required fields are marked *

error: Content is protected !!