
ಉದಯವಾಹಿನಿ, ಚನ್ನಪಟ್ಟಣ : ಉಪ ಚುನಾವಣೆ ಕಣವಾಗಿರುವ ತಾಲ್ಲೂಕಿನಲ್ಲಿ ಪೊಲೀಸರು ಮತ್ತು ಅರೆ ಸೇನಾಪಡೆ ಭಾನುವಾರ ಪಥ ಸಂಚಲನ ನಡೆಸಿದರು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಗನೂರು, ತಗಚಗೆರೆ, ಕೋಡಂಬಳ್ಳಿ ಹಾಗೂ ಮೊಳೆದೊಡ್ಡಿ ಗ್ರಾಮಗಳಲ್ಲಿ ಜಿಲ್ಲಾ ಪಥ ಸಂಚಲನ ನಡೆಯಿತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್, ಚನ್ನಪಟ್ಟಣ ಡಿವೈಎಸ್ಪಿ ಕೆ.ಸಿ. ಗಿರಿ ಸೇರಿದಂತೆ ಸ್ಥಳೀಯ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಗಳು ಭಾಗವಹಿಸಿದ್ದರು.
