ಉದಯವಾಹಿನಿ, ಹಾಸನ: ನಗರದ ಅಧಿದೇವತೆ ಹಾಸನಾಂಬ ದೇವಿಯ ದರ್ಶನಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.ಶುಕ್ರವಾರ ಸಂಜೆ 7 ಗಂಟೆಗೆ ಹಾಸನಾಂಬ ಗರ್ಭಗುಡಿಯ ಬಾಗಿಲನ್ನು ಹಾಕಲಾಗಿತ್ತು. ಆದ್ದರಿಂದ ನಿನ್ನೆ ಬೆಳಗಿನ ಜಾವ 4 ಗಂಟೆಯಿಂದ ದರ್ಶನ ಆರಂಭವಾಗಿ ಮಧ್ಯಾಹ್ನದವರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಮಧ್ಯಾಹ್ನ 2 ಗಂಟೆಯಿಂದ 3 ರವರೆಗೆ ದೇವಿಗೆ ನೈವೇದ್ಯ ಹಾಗೂ ವಿಶೇಷ ಪೂಜೆ ಹಿನ್ನೆಲೆ ದರ್ಶನಕ್ಕೆ ಅವಕಾಶ ಇರಲಿಲ್ಲ. ಮಧ್ಯಾಹ್ನ 3 ರಿಂದ ಮುಂಜಾನೆ 3 ರವರೆಗೆ ಭಕ್ತರ ಆಗಮನವನ್ನು ನೋಡಿಕೊಂಡು ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಆಡಳಿತಾಧಿಕಾರಿ ತಿಳಿಸಿದ್ದಾರೆ.ವಿಶೇಷ ದರ್ಶನದ ಕ್ಯೂ ಕಡಿಮೆ : ಪ್ರಾರಂಭದಲ್ಲಿ ವಿಶೇಷ ದರ್ಶನಕ್ಕೆ ಭಕ್ತರ ಸಂಖ್ಯೆ ಕಡಿಮೆಯಿದ್ದು, ಸಾಮಾನ್ಯ ಸರದಿ ಸಾಲಿನಲ್ಲಿ ಭಕ್ತರು ತೆರಳುತ್ತಿದ್ದ ದೃಶ್ಯಗಳು ಕಂಡುಬಂದವು. ಅಲ್ಲಿಯೂ ಕೂಡ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಭಕ್ತರು ವಿಶೇಷ ದರ್ಶನದ 1000 ಹಾಗೂ 300 ರೂ ಟಿಕೆಟ್‌ ಕೌಂಟರ್‌ನ ಕ್ಯೂ ಹೆಚ್ಚಾಗಿತ್ತು. 1000 ರೂ.ಗಳ ಟಿಕೆಟ್‌ 15,000 ಟಿಕೆಟ್‌ಗಳು ಮಾರಾಟವಾಗಿದ್ದು, 300 ರೂ.ಗಳ 20,000 ಟಿಕೆಟ್‌ಗಳು ಮಾರಾಟವಾಗಿದ್ದು, ಒಟ್ಟು 2.50 ಕೋಟಿಗೂ ಹೆಚ್ಚು ವಿಶೇಷ ದರ್ಶನದ ಟಿಕೆಟ್‌ಗಳು ಮಾರಾಟವಾಗಿವೆ.
ಈ ಬಾರಿ ಗಣ್ಯರು ಮತ್ತು ಅತೀ ಗಣ್ಯರ ಸಾಲಿನಲ್ಲಿ ಹೆಚ್ಚು ಸುತ್ತಿಬಳಸಿ ಬರಲು ಬ್ಯಾರಿಕೆಡ್‌ ಹಾಕಲಾಗಿದ್ದು, ವೃದ್ಧರು ಮತ್ತು ಮಕ್ಕಳನ್ನು ಕರೆತಂದವರು ದರ್ಶನಕ್ಕೆ ಹೆಚ್ಚಿನ ಸಮಯ ತಗುಲುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ದರ್ಶನ ಪಡೆದ ಜೈನಮಠದ ಮಹಾಸ್ವಾಮೀಜಿ:ಹಾಸನಾಂಬ ದೇವಿ ದರ್ಶನ ಪಡೆಯಲು ಆಗಮಿಸಿದ ಶ್ರವಣಬೆಳಗೊಳದ ಜೈನಮಠದ ಮಹಾಸ್ವಾಮೀಜಿ ಪರಮ ಪೂಜ್ಯ ಜಗದ್ಗುರು ಸ್ವಸ್ತಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಸ್ವಾಮೀಜಿ ದೇವಿಯ ದರ್ಶನ ಪಡೆದರು.

 

Leave a Reply

Your email address will not be published. Required fields are marked *

error: Content is protected !!