ಉದಯವಾಹಿನಿ, ಆನೇಕಲ್ : ತ್ತಿಬೆಲೆ ಗಡಿಯಲ್ಲಿ ಕಳೆದ ವರ್ಷ ಪಟಾಕಿ ಮಳಿಗೆಯ ಗೋಡನ್ ಗೆ ಬೆಂಕಿ ತಗುಲಿ ಸಾಕಷ್ಠು ಸಾವು ನೋವುಗಳಾಗಿದ್ದು ಈ ಬಾರಿ ಅತ್ತಿಬೆಲೆಯಲ್ಲಿ ಗಡಿಯಲ್ಲಿ ಪಟಾಕಿ ಮಳಿಗೆಯನ್ನು ಇಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಸರ್ಜಾಪುರ ಬಾಗಲೂರು ರಸ್ತೆಯಲ್ಲಿರುವ ಕಗ್ಗನೂರು ಗ್ರಾಮದ ಬಳಿಯಲ್ಲಿ ಸಾಕಷ್ಠು ಪಟಾಕಿ ಮಳಿಗೆಗಳು ಪ್ರಾರಂಭವಾಗಿವೆ.
ಕ್ರಾಕರ್‍ಸ್ ಬಜಾರ್ ನ ಮುಖ್ಯಸ್ಥ ಜೂಜುವಾಡಿ ಸುರೇಶ್ ರವರು ಮಾತನಾಡಿ ಪ್ರತಿ ವರ್ಷವು ಅತ್ತಿಬೆಲೆ ಗಡಿಯಲ್ಲಿ ದೀಪಾವಳಿ ಹಬ್ಬದ ಸಂಧರ್ಭದಲ್ಲಿ ಸುಮಾರು ೧೫ ಪಟಾಕಿ ಮಳಿಗೆಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದೆವು ಆದರೆ ಈ ಬಾರಿ ಅತ್ತಿಬೆಲೆ ಗಡಿಯಲ್ಲಿ ಮಳಿಗೆಯನ್ನು ಪ್ರಾರಂಭಿಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಕಗ್ಗನೂರು ಗ್ರಾಮದ ಬಳಿಯಲ್ಲಿ ಕ್ರಾಕರ್‍ಸ್ ಬಜಾರ್ ಎಂಬ ಹೆಸರಿನಲ್ಲಿ ಸುಮಾರು ೧೦ ಮಳಿಗೆಗಳನ್ನು ಪ್ರಾರಂಬಿಸಿದ್ದು.
ನಮ್ಮ ಮಳಿಗೆಯಲ್ಲಿ ತಮಿಳುನಾಡಿನ ಶಿವಕಾಶಿಯಿಂದ ನೇರವಾಗಿ ತಂದು ಗ್ರಾಹಕರಿಗೆ ಹೋಲ್ ಸೆಲ್ ದರದಲ್ಲಿ ಗುಣಮಟ್ಟದ ಪಟಾಕಿಗಳನ್ನು ನೀಡುತ್ತಿದ್ದು.ವಿಶೇಷವಾಗಿ ಎಲ್ಲಾ ಬ್ರಾಂಡ್ ಗಳ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ ಹಾಗೆಯೇ ಪಾಕಿಂಗ್ ವ್ಯವಸ್ಥೆಯನ್ನು ಸಹ ಮಾಡಲಾಗಿದ್ದು ಸರ್ಜಾಪುರ. ದೊಮ್ಮಸಂದ್ರ, ವರ್ತೂರು. ಬೆಳ್ಳಂದೂರು ಹಾಗೂ ಬೆಂಗಳೂರಿನ ನಿವಾಸಿಗಳು ಪಟಾಕಿಗಳನ್ನು ತೆಗೆದು ಕೊಳ್ಳಲು ಈ ಮಳಿಗೆ ಹತ್ತಿರ ವಾಗುತ್ತದೆ ಎಂದು ಹೇಳಿದರು.
