ಉದಯವಾಹಿನಿ, ಕೋಲಾರ: ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿದ್ದು, ಭಕ್ತರು ಕಡ್ಡಾಯವಾಗಿ ಸಾಂಪ್ರಾಯಿಕ ಹಾಗೂ ಸಭ್ಯ ಉಡುಗೆ ತೊಟ್ಟು ದೇಗುಲ ಪ್ರವೇಶಿಸಬೇಕಿದೆ.ಕೋಲಾರ ನಗರದ ಶಕ್ತಿದೇವತೆ ಕೋಲಾರಮ್ಮ ದೇಗುಲ ಸೇರಿದಂತೆ ಎಲ್ಲಾ ದೇಗುಲಗಳಲ್ಲಿ ಈ ಸಂಬಂಧ ಇಲಾಖೆಯಿಂದ ಸೂಚನೆ ಇರುವ ಬ್ಯಾನರ್, ಪೋಸ್ಟರ್, ಫಲಕ ಅಳವಡಿಸಲಾಗುತ್ತಿದೆ. ಯಾವ ರೀತಿ ಉಡುಪು ಧರಿಸಬೇಕು, ಯಾವ ರೀತಿಯ ಉಡುಪು ಧರಿಸಬಾರದೆಂಬ ಸೂಚನೆಯನ್ನೂ ನೀಡಲಾಗಿದೆ.
ದೇವಾಲಯಕ್ಕೆ ಬರುವ ಪುರುಷರು ಧೋತಿ, ಪಂಚೆ ಅಥವಾ ಪ್ಯಾಂಟ್, ಷರ್ಟ್ ಧರಿಸಬಹುದು. ಮಹಿಳೆಯರು ಸೀರೆ ಅಥವಾ ಚೂಡಿದಾರ್, ಕುರ್ತಾ ಧರಿಸಬಹುದು. ಬರ್ಮುಡಾ, ಮಿಡಿ, ಸ್ಕರ್ಟ್ಸ್ , ಶಾರ್ಟ್ಸ್, ಟೈಟ್ ಜೀನ್ಸ್ ಪ್ಯಾಂಟ್, ಟೀ ಷರ್ಟ್, ನೈಟ್ ಪ್ಯಾಂಟ್, ಸ್ಲೀವ್‌ಲೆಸ್ ಉಡುಪು ಧರಿಸಿ ಬರುವಂತಿಲ್ಲ. ಕೆಲವೆಡೆ ಈಗಾಗಲೇ ನಿಯಮ ಜಾರಿಯಲ್ಲಿದ್ದರೂ ಸರಿಯಾಗಿ ಜಾರಿಯಾಗುತ್ತಿರಲಿಲ್ಲ.
