ಉದಯವಾಹಿನಿ, ಕಲಬುರಗಿ: ಕನ್ನಡ ನಾಡು-ನುಡಿ, ನೆಲ-ಜಲವು ಶ್ರೀಮಂತಗೊಳ್ಳಬೇಕಾದರೆ, ನಮ್ಮ ಮಾತೃ ಭಾಷೆ ಅಭಿಮನದ ಭಾಷೆಯಾಗಿ ಮೆರೆಯಬೇಕು ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು.
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ರಾಜ್ಯೋತ್ಸವದ ಕನ್ನಡ ಸಂಭ್ರಮ-2024 ರ ಭಾಗವಾಗಿ ನಗರದ ಜಗತ್ ವೃತದ್ದಲ್ಲಿ ಆಯೋಜಿಸಿದ ಕನ್ನಡ ಜಾಗೃತಿ ಜಾಥಾ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ನಮ್ನ ಭಾಷೆಯನ್ನು ಪ್ರೀತಿಸಬೇಕು. ಪ್ರತಿನಿತ್ಯ ಕನ್ನಡದಲ್ಲಿಯೇ ಮಾತಾಡಬೇಕು. ಹೆಚ್ಚೆಚ್ಚು ಕನ್ನಡ ಮಾತಾಡಿದರೆ ಅದು ಮತ್ತಷ್ಟು ಶ್ರೀಮಂತಿಕೆ ಹೊಂದುತ್ತದೆ. ಹಿರಿಯರ ಕಟ್ಟಿ ಬೆಲೆಸಿದ ಕನ್ನಡ ಭಾಷೆಯ ಸೊಗಡನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಸದಾ ಕನ್ನಡ ಕಟ್ಟುವ ಕಾರ್ಯಚಟುವಟಿಕೆಗಳನ್ನು ಏರ್ಪಡಿಸಿಕೊಂಡು ಬರುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರಿಗೂ ಮಾದರಿಯಾಗಿದೆ. ರಾಜ್ಯೋತ್ಸವದ ನಿಮಿತ್ತ ನವೆಂಬರ್ ತಿಂಗಳಾದ್ಯಂತ ವಿವಿಧ – ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿದ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹಾಗೂ ಅವರ ಪದಾಧಿಕಾರಿಗಳ ಕಾರ್ಯ ಉತ್ತಮವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಕೇವಲ ಭಾಷೆ ಅಲ್ಲ. ಅದು ಎಲ್ಲರ ಉಸಿರಾಗಿದೆ. ಈ ಕನ್ನಡ ನಾಡಿನಲ್ಲಿ ವಾಸ ಮಾಡುತ್ತಿರುವ ಎಲ್ಲ ಜಾತಿ=ಧರ್ಮದವರು ಕನ್ನಡವನ್ನು ತಮ್ಮದಾಗಿಸಿಕೊಳ್ಳಬೇಕು. ಈ ಭಾಷೆ ರಾಜ್ಯ ಮತ್ತು ಹಳ್ಳಿಗಳ ಮೂಲೆ ಮೂಲೆಗಳಲ್ಲಿ ಬೆಳೆಯಬೇಕು.ಮನೆ-ಮನಗಳಲ್ಲಿ ಕನ್ನಡದ ದೀಪ ಪ್ರಜ್ವಲಿಸಬೇಕು. ಕನ್ನಡದ ಉಳಿವಿಗಾಗಿ ನುಡಿ ಹಬ್ಬದ ಮೂಲಕ ಜನರಿಗೆ ಪ್ರೇರೆಪಿಸಲು ಪರಿಷತ್ತು ಕನ್ನಡ ನಿತ್ಯೋತ್ಸವದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!