ಉದಯವಾಹಿನಿ, ಬೆಂಗಳೂರು: ಸಚಿವರ ಖಾತೆ ಹಂಚಿಕೆ ಪಟ್ಟಿಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮೋದನೆ ನೀಡಿದ್ದು, ಕೊನೆಗೂ ಸಚಿವರಿಗೆ ಖಾತೆ ಹಂಚಿಕೆಯಾಗಿದೆ.ಮೇ 20 ರಂದು ಎಂಟು ಕ್ಯಾಬಿನೆಟ್ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಕ್ರಮವಾಗಿ ಸಿಎಂ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಾದ ಬಳಿಕ ಮೇ 27 ರಂದು 24 ಹೆಚ್ಚುವರಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಈಗ ಮೇ 28 ರಂದು ಹೊರಡಿಸಿದ ಅಧಿಸೂಚನೆಯಲ್ಲಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಸಚಿವರಿಗೆ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಶಿಫಾರಸನ್ನು ಅನುಮೋದಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ಕೆಲವೇ ದಿನಗಳ ನಂತರ, ಸಚಿವರಿಗೆ ಆಯಾ ಇಲಾಖೆಗಳನ್ನು ನಿಯೋಜಿಸುವುದರೊಂದಿಗೆ ಅಂತಿಮವಾಗಿ ಸಂಪುಟ ರಚನೆಯಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು, ಐಟಿ-ಬಿಟಿ, ಮೂಲಸೌಕರ್ಯ ಅಭಿವೃದ್ಧಿ ಖಾತೆಯನ್ನು ತಮ್ಮೊಂದಿಗೆ ಇರಿಸಿಕೊಂಡಿದ್ದರೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬೃಹತ್ ಮತ್ತು ಮಧ್ಯಮ ನೀರಾವರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಗೃಹ ಇಲಾಖೆಯನ್ನು ಡಾ.ಜಿ.ಪರಮೇಶ್ವರ ಅವರಿಗೆ ನೀಡಲಾಗಿದ್ದು, ಗುಪ್ತಚರ ಇಲಾಖೆಯನ್ನು ಸಿದ್ದರಾಮಯ್ಯ ಅವರೇ ನಿರ್ವಹಿಸಲಿದ್ದಾರೆ.
ಸಚಿವರ ಖಾತೆ ಹಂಚಿಕೆಯ ಪಟ್ಟಿ ಇಂತಿದೆ… ಸಿಎಂ ಸಿದ್ದರಾಮಯ್ಯ- ಹಣಕಾಸು, ಐಟಿ-ಬಿಟಿ, ಗುಪ್ತಚರ, ವಾರ್ತಾ, ಐಟಿ-ಬಿಟಿ, ಮೂಲಸೌಕರ್ಯ ಅಭಿವೃದ್ಧಿ ಖಾತೆ ಡಿಸಿಎಂ ಡಿಕೆ ಶಿವಕುಮಾರ್- ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ ಡಾ. ಜಿ.ಪರಮೇಶ್ವರ್- ಗೃಹ ಹೆಚ್ ಕೆ ಪಾಟೀಲ್- ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ ಕೆ.ಹೆಚ್.ಮುನಿಯಪ್ಪ- ಆಹಾರ & ನಾಗರಿಕ ಸರಬರಾಜು ವ್ಯವಹಾರ ರಾಮಲಿಂಗರೆಡ್ಡಿ- ಸಾರಿಗೆ & ಮುಜರಾಯಿ ಎಂ.ಬಿ.ಪಾಟೀಲ್: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಕೆ.ಜೆ.ಜಾರ್ಜ್- ಇಂಧನ ದಿನೇಶ್ ಗುಂಡೂರಾವ್- ಆರೋಗ್ಯ & ಕುಟುಂಬ ಕಲ್ಯಾಣ ಹೆಚ್ ಸಿ ಮಹದೇವಪ್ಪ- ಸಮಾಜಕಲ್ಯಾಣ ಸತೀಶ್ ಜಾರಕಿಹೊಳಿ- ಲೋಕೋಪಯೋಗಿ ಕೃಷ್ಣ ಬೈರೇಗೌಡ- ಕಂದಾಯ ಪ್ರಿಯಾಂಕ್ ಖರ್ಗೆ- ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಶಿವಾನಂದ ಪಾಟೀಲ್- ಜವಳಿ, ಸಕ್ಕರೆ, ಸಹಕಾರ ಇಲಾಖೆಯ ಕೃಷಿ ಮಾರುಕಟ್ಟೆ ಜಮೀರ್ ಅಹಮದ್ ಖಾನ್- ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳು ಶರಣುಬಸಪ್ಪ ದರ್ಶನಾಪುರ್- ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು ಈಶ್ವರ್ ಖಂಡ್ರೆ- ಅರಣ್ಯ ಮತ್ತು ಪರಿಸರ ಖಾತೆ ಚಲುವರಾಯಸ್ವಾಮಿ- ಕೃಷಿ ಎಸ್.ಎಸ್.ಮಲ್ಲಿಕಾರ್ಜುನ- ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ರಹೀ ಖಾನ್- ಪೌರಾಡಳಿತ, ಹಜ್ ಖಾತೆ ಸಂತೋಷ ಲಾಡ್- ಕಾರ್ಮಿಕ ಡಾ.ಶರಣುಪ್ರಕಾಶ್ ಪಾಟೀಲ್- ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಆರ್.ಬಿ.ತಿಮ್ಮಾಪುರ- ಅಬಕಾರಿ ಕೆ.ವೆಂಕಟೇಶ್- ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಶಿವರಾಜ್ ತಂಗಡಗಿ- ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಡಿ.ಸುಧಾಕರ್- ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಬಿ.ನಾಗೇಂದ್ರ- ಯುವಜನ ಸೇವೆ & ಕ್ರೀಡೆ, ಪರಿಶಿಷ್ಟ ಪಂಗಡ ಕಲ್ಯಾಣ ಕೆ.ಎನ್.ರಾಜಣ್ಣ- ಸಹಕಾರ ಬೈರತಿ ಸುರೇಶ್- ನಗರಾಭಿವೃದ್ಧಿ, ಪಟ್ಟಣ ಯೋಜನೆ(ಬೆಂಗಳೂರು ಹೊರತು ಪಡಿಸಿ) ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಮಂಕಾಳ್ ವೈದ್ಯ- ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಡಾ.ಎಂ.ಸಿ.ಸುಧಾಕರ್- ಉನ್ನತ ಶಿಕ್ಷಣ ಎನ್.ಎಸ್.ಬೋಸರಾಜ್- ಸಣ್ಣ ನೀರಾವರಿ ಮತ್ತು ವಿಜ್ಞಾನ & ತಂತ್ರಜ್ಞಾನ

Leave a Reply

Your email address will not be published. Required fields are marked *

error: Content is protected !!