ಉದಯವಾಹಿನಿ,ಶಿಡ್ಲಘಟ್ಟ : ರೈತರ ಜೀವಾಳಾಗಿರುವ 14 ಕುರಿಗಳು. ಬೀದಿನಾಯಿಗಳ ದಾಳಿಗೆ ಸಿಲುಕಿ 4 ಕುರಿಗಳು ಬಲಿಯಾಗಿವೆ. 1 ಕುರಿ ತೀವ್ರವಾಗಿ ಅಸ್ವಸ್ಥಗೊಂಡಿದೆ. 6 ಕುರಿಗಳು ಗಾಯಗೊಂಡಿವೆ.ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕತೇಕಹಳ್ಳಿ ಗ್ರಾಮದ ನಿವಾಸಿ ಮಹಿಳೆ ಕಾಂತಮ್ಮ ರವರಿಗೆ ಸೇರಿದ ಕುರಿಗಳು ನಾಯಿಗಳ ದಾಳಿಯಿಂದ ಮೃತಪಟ್ಟಿವೆ. ಸೋಮವಾರ ಬೆಳಗ್ಗೆ 8 ಗಂಟೆಯಲ್ಲಿ ಹೊರಗಡೆ ಕಟ್ಟಿಹಾಕಿದ್ದ ಸಂದರ್ಭದಲ್ಲಿ ಯಾರೂ ಇಲ್ಲದ ವೇಳೆ ಈ ರೀತಿಯ ಘಟನೆ ನಡೆದಿದೆ.ಜೀವನಕ್ಕೆಂದು ಕುರಿಗಳನ್ನು ಸಾಕುತ್ತಿದ್ದು, ಈ ದಿನ 4 ಕುರಿಗಳು ಬೀದಿ ನಾಯಿಗಳ ಹಾವಳಿಗೆ ತುತ್ತಾಗಿವೆ. ನಮಗೆ ಈ ದುರ್ಘಟನೆಯಿಂದ ಸುಮಾರು 40 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ದಯವಿಟ್ಟು ನಮಗೆ ಪರಿಹಾರ ಒದಗಿಸಿಕೊಡಿ ಹಾಗೇಯೇ ಬೀದಿ ನಾಯಿಗಳ ಹಾವಳಿಗೆ ಸೂಕ್ತ ಪರಿಹಾರ ನೀಡಿ ಮುಂದೆ ಬೇರೆ ಯಾವ ಕುರಿಗಳಿಗೂ ಈ ರೀತಿ ಘಟನೆ ಉಂಟಾಗದಂತೆ ಸೂಕ್ತ ಪರಿಹಾರ ನೀಡಿ ಎಂದು ನೊಂದ ಮಹಿಳೆ ಕಾಂತಮ್ಮ ತಮ್ಮ ಅಳಲನ್ನು ತೋಡಿಕೊಂಡರು. ವ್ಯಾಘ್ರವಾದ ಶ್ವಾನಗಳಿಗೆ ಬೆಚ್ಚಿಬಿದ್ದ ನಿವಾಸಿಗಳು, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸುವ ಜೊತೆಗೆ, ಕುರಿಗಳ ಸಾವಿನಿಂದ ತಮಗಾಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಪಶು ವೈದ್ಯಕೀಯ ಮತ್ತು ಸೇವಾ ಇಲಾಖೆಯ ಅಧಿಕಾರಿಗಳನ್ನು ಮಾಜಿ ಮಂಡಲ್ ಅಧ್ಯಕ್ಷ ಟಿವಿ ಶ್ರೀನಿವಾಸರೆಡ್ಡಿ ಒತ್ತಾಯಿಸಿದ್ದಾರೆ ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಬೀದಿ ನಾಯಿಗ ದಾಳಿಗೆ ಕುರಿಗಳು ತುತ್ತಾಗಿವೆ. ಬಲಿಯಾದಂತಹ ಕುರಿಗಳಿಗೆ ಸರ್ಕಾರದಿಂದ ಅನುಗ್ರಹ ಯೋಜನೆಯಲ್ಲಿ ಒಂದು ಕುರಿಗೆ 5 ಸಾವಿರ ರೂಪಾಯಿ ಪರಿಹಾರ ಇದೆ ಅದನ್ನ ಫಲಾನುಭವಿಗೆ ಇಲಾಖೆಯಿಂದ ಕೊಡಿಸಲು ಪ್ರಯತ್ನಿಸುತ್ತೇವೆ.
-ಪಶು ವೈದ್ಯಾಧಿಕಾರಿ ಡಾ.ಎನ್.ವಿ ಮುನಿಕೃಷ್ಣ
.
