ಉದಯವಾಹಿನಿ, ಕೋಲಾರ: ಏಕಾಏಕಿ ಹೂವಿನ ಬೆಲೆ ಕುಸಿತ ಕಂಡ ಹಿನ್ನೆಲೆ ತೀವ್ರ ಬೇಸರ ಹೊರಹಾಕಿರುವ ರೈತರೊಬ್ಬರು ತಾವು ಬೆಳೆದ ಹೂವನ್ನು ರಸ್ತೆಬದಿ ಸುರಿದು ಆಕ್ರೋಶ ವ್ಯಕ್ತಪಡಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನೆರ್ನಹಳ್ಳಿಯ ನಾರಾಯಣಪ್ಪ ಎಂಬುವರು ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಎಕರೆಗೆ ೫೦ ಸಾವಿರದಂತೆ ಖರ್ಚು ಮಾಡಿ ಚೆಂಡು ಹೂವು ಬೆಳೆದಿದ್ದರು. ಆದರೆ ಚೆಂಡು ಹೂವು ಬೆಲೆ ಕುಸಿತ ಕಂಡ ಹಿನ್ನೆಲೆ ಕೋಲಾರ ಮುಖ್ಯರಸ್ತೆ ಬದಿಯಲ್ಲಿ ಸುರಿದಿದ್ದ ವ್ಯಾಪಾರಿಗಳು ಕೆಜಿಗೆ ೧೦ ರೂ.ನಂತೆ ಕೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಇಲ್ಲದೆ ಹೂವಿನ ಬೆಳೆಗಾರರು ಕಂಗಾಲಾಗಿದ್ದಾರೆ. ಅಲ್ಲದೆ, ನಾರಾಯಣಪ್ಪ ಮಾತ್ರವಲ್ಲದೆ ಸರ್ಕಾರ ರೈತರ ನೆರವಿಗೆ ಧಾವಿಸುವಂತೆ ಒತ್ತಾಯಿಸಿದ್ದಾರೆ.
