ಉದಯವಾಹಿನಿ, ಜಾಲಹಳ್ಳಿ: ಸಮೀಪದ ಪರಪುರ ಕೆರೆಯ ಕೆಳ ಭಾಗದಲ್ಲಿ ನರೇಗಾ ಯೋಜನೆ ಅಡಿ ನಿರ್ಮಿಸಿದ ಅಮೃತ ಸರೋವರದ ಹತ್ತಿರ ಮಂಗಳವಾರ ಪಿಡಿಒ ನರಸಪ್ಪ ಆಶಾಪುರ ನೇತೃತ್ವದಲ್ಲಿ ಸಂವಿಧಾನ ದಿನ ಆಚರಿಸಲಾಯಿತು. ಕೂಲಿ ಕಾರ್ಮಿಕರಿಗೆ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿಲಾಯಿತು.

ನಂತರ ಮಾತನಾಡಿ, ‘ಭಾರತ ದೇಶದಲ್ಲಿ ಬಹು ಧರ್ಮೀಯರು ವಾಸವಾಗಿದ್ದು,  ಸಾಮಾಜಿಕ ನ್ಯಾಯ ದೊರೆಯಬೇಕೆನ್ನುವ ಆಶಯದೊಂದಿಗೆ ವಿಶ್ವದಲ್ಲಿ ಈ ಮೊದಲು ರಚನೆಯಾಗಿದ್ದ ಬ್ರಿಟಿಷ್, ಫ್ರಾನ್ಸ್, ಅಮೆರಿಕ, ಕೆನಡಾ, ಸೋವಿಯತ್ ರಷ್ಯಾ ದೇಶಗಳ ಸಂವಿಧಾನದಿಂದ ಒಂದೊಂದು ಅಂಶಗಳನ್ನು ಪಡೆದು, 60 ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಬೇಕಾದ ಅಂಶಗಳನ್ನು ಸೇರಿಸಿ ಸಂವಿಧಾನ ರಚಿಸಿದರು.

Leave a Reply

Your email address will not be published. Required fields are marked *

error: Content is protected !!