ಉದಯವಾಹಿನಿ, ಬೆಂಗಳೂರು: ನಾದಿನಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಿರುವುದನ್ನು ಪ್ರಶ್ನಿಸಲು ಹೋದ ಬಾವನ ಮೇಲೆ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದ ಇಬ್ಬರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂಧ್ರಹಳ್ಳಿಯ ಸಾಯಿಬಾಬಾ ನಗರದ ಕಾರು ಚಾಲಕ ಕಾರ್ತಿಕ್(೨೭) ಹಾಗೂ ಶಾಲಾ ವಾಹನ ಚೇತನ್ ಕುಮಾರ್(೩೩) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಕಳೆದ ನ.೨೭ ರಂದು ರಾತ್ರಿ ೮ರ ವೇಳೆ ಅವಿನಾಶ್ ಎಂಬುವರ ಪತ್ನಿ ನಿಶ್ಚಿತ ಜೊತೆ ಆರೋಪಿ ಕಾರ್ತಿಕ್ ಸಲುಗೆಯಿಂದಿದ್ದು, ಅತಿಯಾಗಿ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನು ವಿಚಾರಿಸಲು ದೂರುದಾರ ಅವಿನಾಶ್ ರವರ ಅಣ್ಣ ಅಭಿಷೇಕ್ ಕೇಳಲು ಹೋಗಿದ್ದಾಗ ಮಾತಿಗೆ ಮಾತು ಬೆಳೆದು ಗಲಾಟೆಯಾಗಿ ಆಕ್ರೋಶಗೊಂಡ ಆರೋಪಿ ಕಾರ್ತಿಕ್ ಸಹಚರ ಚೇತನ್ ಕುಮಾರ್ ಸೇರಿ ಅಭಿಷೇಕ್ ಎಂಬುವರ ತಲೆಗೆ, ಮುಖಕ್ಕೆ ಕೈಗೆ ಧರಿಸಿದ್ದ ಮೆಟಲ್ ಬಳೆಯಿಂದ ಬಲವಾಗಿ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು. ಬಿಡಿಸಲು ಬಂದಿದ್ದ ಫಿಯಾದಿ ಅವಿನಾಶ್ ಸಹ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದರು.
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡ ಬೆನ್ನಲ್ಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಅಭಿಷೇಕ್ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ಕಾರ್ತಿಕ್ ಮತ್ತು ಆತನ ಸಹಚರ ಚೇತನ್ ಕುಮಾರ್ ನನ್ನು ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಬ್ಯಾಡರಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ವೀರಣ್ಣ ಎಸ್ ಮಗಿ ರವರ ನೇತೃತ್ವ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
