ಉದಯವಾಹಿನಿ, ಬೆಂಗಳೂರು: ಐದು ಗ್ಯಾರಂಟಿ ಯೋಜನೆಯಲ್ಲಿ ಗೃಹ ಜ್ಯೋತಿ ಯೋಜನೆ ಕೂಡ ಒಂದಾಗಿದೆ. ಚುನಾವಣಾ ಪೂರ್ವದಲ್ಲಿ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ನಿನಗೂ ಫ್ರೀ, ನನಗೂ ಫ್ರೀ, ಬಾಡಿಗೆದಾರರಿಗೂ ಫ್ರಿ ಉಚಿತ ವಿದ್ಯುತ್ 200 ಯೂನಿಟ್ ವರೆಗೆ ಎಂಬುದಾಗಿ ಹೇಳಿದ್ದರು.ಆದ್ರೇ ಇಂದು ಅಧಿಕೃತ ಆದೇಶದಲ್ಲಿ ವಿಧಿಸಿರುವಂತ ಷರತ್ತಿನ ವಿರುದ್ಧ ಬಾಡಿಗೆದಾರರು ಸಿಡೆದಿದ್ದಾರೆ.ಹೌದು.. ರಾಜ್ಯ ಸರ್ಕಾರ ಇಂದು ಹೊರಡಿಸಿರುವಂತ ಗೃಹ ಜ್ಯೋತಿ ಯೋಜನೆಯ ನಡವಳಿಯ ಷರತ್ತಿನಲ್ಲಿ ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ, ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರಾಗುವರು ಎಂದು ಷರತ್ತು ವಿಧಿಸಿದೆ. ಇದೇ ಮಾತನ್ನು ಇಂಧನ ಸಚಿವ ಒಂದು ಆರ್ ಆರ್ ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ ಎಂಬುದಾಗಿ ತಿಳಿಸಿದ್ದಾರೆ.ಇದಷ್ಟೇ ಅಲ್ಲದೆ ಬಾಡಿಗೆದಾರರು, ಮಾಲೀಕರು ಅಂತ್ಯ ವ್ಯತ್ಯಾಸ ಮಾಡುತ್ತಿಲ್ಲ. ಆರ್ ಆರ್ ಸಂಖ್ಯೆಯನ್ನೇ ಸ್ಥಾವರ ಎಂದು ಕರೆಯಲಾಗುತ್ತದೆ. ಯಾರು ಎಷ್ಟೇ ಆರ್ ಆರ್ ಸಂಖ್ಯೆ ಹೊಂದಿದ್ದರೂ, ಒಂದು ಆರ್ ಆರ್ ಸಂಖ್ಯೆ ಮಾತ್ರ ಯೋಜನೆ ವ್ಯಾಪ್ತಿಗೆ ಬರುತ್ತದೆ. ಆರ್ ಆರ್ ಸಂಖ್ಯೆ ಎಂದರೆ ಬೆಸ್ಕಾಂ ನೀಡುವ ಯುನಿಕ್ ಐಡಿ. ಆರ್ ಆರ್ ಅಂದರೆ ರೆವೆನ್ಯೂ ರಿಜಿಸ್ಟರ್ ನಂಬರ್ ಎಂದು ಹೇಳಿದ್ದಾರೆ.ಒಬ್ಬರ ಹೆಸರಿನಲ್ಲಿ ಎಷ್ಟು ಬೇಕಾದರೂ ಆರ್ ಆರ್ ಇರಬಹುದು. ಆದರೆ ಉಚಿತವಾಗಿ ಸಿಗುವುದು ಒಂದು ಆರ್ ಆರ್ ಸಂಖ್ಯೆಗೆ ಮಾತ್ರ. ಒಂದು ಆರ್ ಆರ್ ಸಂಖ್ಯೆಗೆ ಮಾತ್ರ 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದ್ದಾರೆ.ಇನ್ನೂ ಯಾರಿಗೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂದು ಗೊತ್ತಾಗಬೇಕು. ಹೀಗಾಗಿ ಉಚಿತ ವಿದ್ಯುತ್ ಯೋಜನೆ ಪಡೆಯಲು ಅರ್ಜಿ ಕರೆಯಲಾಗುತ್ತಿದೆ. ರಾಜ್ಯದಲ್ಲಿ 2 ಕೋಟಿ 15 ಲಕ್ಷ ಆರ್ ಆರ್ ನಂಬರ್ ಇದ್ದಾವೆ. ಉಚಿತ ವಿದ್ಯುತ್ ಯೋಜನೆ ಜಾರಿಗೆ 13 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.ಈ ಎಲ್ಲಾ ಮಾಹಿತಿಯಿಂದ ಮನೆ ಮಾಲೀಕರಿಗೆ ಮಾತ್ರವೇ ಉಚಿತ ವಿದ್ಯುತ್ ಸೌಲಭ್ಯ ದೊರೆತು, ಬಾಡಿಗೆದಾರರಿಗೆ ಉಚಿತ ವಿದ್ಯುತ್ ಸೌಲಭ್ಯ ಸಿಗುವುದಿಲ್ಲ ಎಂಬುದಾಗಿ ತಿಳಿದಂತೆ ಆಗಿದೆ. ಈ ಹಿನ್ನಲೆಯಲ್ಲಿ ಅನೇಕರು ರಾಜ್ಯ ಸರ್ಕಾರದ ವಿರುದ್ಧ, ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!