ಉದಯವಾಹಿನಿ, ಹೈದರಾಬಾದ್: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಹೈದರಾಬಾದ್‌ನಲ್ಲಿ ಸುರಿದ ಭಾರೀ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಭಾರೀ ಮಳೆಗೆ ಹೈದರಾಬಾದ್‌ನ ಉತ್ತರ ಮತ್ತು ದಕ್ಷಿಣ ಪ್ರದೇಶಗಳ ಹಲವು ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.ಭಾರೀ ಮಳೆಯ ಪರಿಣಾಮ ಫ್ಲೈಓವರ್, ರಸ್ತೆಗಳು ಮುಳುಗಡೆಯಾಗಿದ್ದು, ಫ್ಲೈಓವರ್‌ಗಳು ನದಿಯಂತೆ ತುಂಬಿ ಹರಿಯುತ್ತಿವೆ. ಹಲವು ಜನನಿಬಿಡ ಪ್ರದೇಶಗಳು ಜಲಾವೃತಗೊಂಡಿವೆ. ರಕ್ಷಣಾ ಪಡೆ ಶುಕ್ರವಾರದಿಂದ ಹಲವು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ವಾಹನಗಳು ನೀರಿನಲ್ಲಿ ಮುಳುಗಿ ನಿಂತಿದ್ದು, ರಸ್ತೆಯಲ್ಲಿ ಸವಾರರು ಪರದಾಟ ನಡೆಸುವಂತಾಗಿದೆ.
ಹೈದರಾಬಾದ್ ಕಾಂಚ ಗಚಿಬೌಲಿ ಫ್ಲೈಓವರ್ ನದಿಯಂತೆ ಹರಿಯುತ್ತಿದೆ. ಚಂದ್ರಾಯನಗುಟ್ಟದಲ್ಲಿ ಭಾರೀ ಮಳೆಯಿಂದಾಗಿ ಅನಾಹುತವೊಂದು ತಪ್ಪಿದೆ. ಗೋಡೆ ಕುಸಿತದಿಂದ ಚಲಿಸುತ್ತಿದ್ದ ಕಾರೊಂದು ಜಸ್ಟ್ ಮಿಸ್ ಆಗಿದೆ. ಮುಂದಿನ ಮೂರು ದಿನಗಳ ಕಾಲ ತೆಲಂಗಾಣಕ್ಕೆ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
