ಉದಯವಾಹಿನಿ, ಭಾರತೀಯ ಚಿತ್ರರಂಗ ಪುರುಷ ಪ್ರಧಾನ. ಚಿತ್ರರಂಗವೂ ಪುರುಷ ಪ್ರಧಾನ, ಅವರು ಮಾಡುವ ಸಿನಿಮಾಗಳು ಸಹ ಸಂಪೂರ್ಣವಾಗಿ ಪುರುಷ ಪ್ರಧಾನ. ಸ್ಟಾರ್ ನಟರುಗಳು ತಮ್ಮ ಪುರುಷತ್ವ ತೋರಿಸುವ ಡೈಲಾಗುಗಳನ್ನು ಪುಂಖಾನುಪುಂಖವಾಗಿ ಹೊಡೆಯುತ್ತಾರೆ. ನಾಯಕಿಯರ ಸೊಂಟ ಗಿಲ್ಲಿ ಗಂಡಸ್ತನದ ಪ್ರದರ್ಶನ ಮಾಡುತ್ತಾರೆ. ನೂರಾರು ಖಳರನ್ನು ಹೊಡೆದುರುಳಿಸಿ ಗಂಡಸ್ತನದ ಪ್ರದರ್ಶನ ಮಾಡುತ್ತಾರೆ. ಇದೀಗ ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರು, ತಮ್ಮೊಳಿಗೆ ಸ್ತ್ರೀಸಂವೇದನೆಯನ್ನು ತೆರೆಯ ಮೇಲೆ ತೋರಿಸಿದ್ದಾರೆ. ಈ ಕಾರಣಕ್ಕೆ ಪ್ರಶಂಸೆಗೆ ಸಹ ಗುರಿಯಾಗಿದ್ದಾರೆ.
ಮೋಹನ್ಲಾಲ್ ಭಾರತದ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು. ಮೋಹನ್ಲಾಲ್ ಹಲವು ಆಕ್ಷನ್, ಕಮರ್ಶಿಯಲ್ ಸಿನಿಮಾಗಳ ಜೊತೆಗೆ ಸೂಕ್ಷ್ಮ ಸಂವೇದನೆಯ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಇದೀಗ ಮೋಹನ್ಲಾಲ್ ನಟಿಸಿರುವ ಆಭರಣ ಜಾಹೀರಾತೊಂದು ಸಖತ್ ಸದ್ದು ಮಾಡುತ್ತಿದೆ. ಸ್ಟಾರ್ ನಟರುಗಳು ಆಭರಣ ಜಾಹೀರಾತುಗಳಲ್ಲಿ ನಟಿಸುವುದು ಹೊಸತೇನೂ ಅಲ್ಲ. ಕನ್ನಡದ ಶಿವರಾಜ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.
ಆದರೆ ಮೋಹನ್ಲಾಲ್ ಇತ್ತೀಚೆಗಷ್ಟೆ ವಿನ್ಸ್ಮೆರಾ ಜುವೆಲ್ಸ್ ಆಭರಣ ಮಳಿಗೆಗಳ ಜಾಹೀರಾತಿನಲ್ಲಿ ನಟಿಸಿದ್ದು, ಮೋಹನ್ಲಾಲ್ ಅವರು ಜಾಹೀರಾತಿನಲ್ಲಿ ಸ್ತ್ರೀಸಂವೇದನೆಯ ಪ್ರದರ್ಶನ ಮಾಡಿರುವ ರೀತಿಯ ಕಾರಣಕ್ಕೆ ಈ ಜಾಹೀರಾತು ಭಾರಿ ವೈರಲ್ ಆಗಿದೆ. ಜಾಹೀರಾತು ನಿರ್ಮಾಣದ್ದೆ ಜಾಹೀರಾತನ್ನು ವಿನ್ಸ್ಮೆರಾ ಜುವೆಲ್ಸ್ ಮಾಡಿದೆ.
