ಉದಯವಾಹಿನಿ, ಬೆಂಗಳೂರು: ಇಸ್ಕಾನ್ ದೇವಾಲಯ ಎಂಬುದು ಅಸಂಖ್ಯಾತ ಹಿಂದೂಗಳ ಪವಿತ್ರ ಸ್ಥಳ. ಇಲ್ಲಿಗೆ ಹಿಂದೂಗಳು ಅತ್ಯಂತ ಭಕ್ತಿ ಭಾವದಿಂದ ಆಗಮಿಸಿ ದೇವರಿಗೆ ನಮಿಸುತ್ತಾರೆ. ಆದ್ರೆ, ಇಂಗ್ಲೆಂಡ್‌ನಲ್ಲಿರುವ ಇಸ್ಕಾನ್ ದೇವಸ್ಥಾನದಲ್ಲಿ ವ್ಯಕ್ತಿಯೋರ್ವ ಇಸ್ಕಾನ್ ದೇವಾಲಯದ ಆವರಣದಲ್ಲಿ ಮಾಂಸಹಾರ ಸೇವಿಸುವ ಮೂಲಕ ಅಪಾರ ಸಂಖ್ಯೆಯ ಭಕ್ತರ ನಂಬಿಕೆಗೆ ಗಾಸಿ ಉಂಟು ಮಾಡಿದ್ದಾನೆ ಎಂದು ಇಸ್ಕಾನ್ ದೇವಾಲಯದ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಲಂಡನ್‌ನಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಪ್ರಾಂಕ್ ಮಾಡಲು ಹೋಗಿ ಇಸ್ಕಾನ್ ದೇವಾಲಯದ ಕ್ಯಾಂಟೀನ್‌ನಲ್ಲಿ ನಾನ್ ವೆಜ್ ಸೇವಿಸಿದ್ದಾರೆ. ಇಸ್ಕಾನ್ ಗೋವಿಂದ ಹೋಟೆಲ್ ಗೆ ಎಂಟ್ರಿ ಕೊಟ್ಟ ವಿದೇಶಿ ಪ್ರಜೆ ಬೇಕಂತಲೇ ಚಿಕನ್ ಸೇವನೆ ಮಾಡಿದ್ದಾನೆ. ಇಸ್ಕಾನ್ ದೇವಾಲಯದ ಕ್ಯಾಂಟೀನ್‌ನಲ್ಲಿ ಮಾಂಸಾಹಾರ ಸೇವಿಸಿದ್ದ ವ್ಯಕ್ತಿಯನ್ನು ಆಫ್ರಿಕನ್ ಮೂಲಕ ಇಂಗ್ಲೆಂಡ್ ನಾಗರಿಕ ಸ್ಯಾಂಜೋ ಎಂದು ತಿಳಿದು ಬಂದಿದೆ. ಇಸ್ಕಾನ್‌ನಲ್ಲಿರುವ ಗೋವಿಂದ ಕ್ಯಾಂಟಿನ್‌ಗೆ ಆಗಮಿಸಿದ ಸ್ಯಾಂಜೋ ಹೋಟೆಲ್‌ಗೆ ಆಗಮಿಸಿ ನಾನ್ ವೆಜ್ ಕೇಳುತ್ತಾನೆ. ನಾನ್ ವೆಜ್, ಈರುಳ್ಳಿ, ಬೆಳ್ಳುಳ್ಳಿ ಸೇರಿಸುವ ಅಡುಗೆ ಸಹ ಇಲ್ಲಿಲ್ಲ ಎಂದು ಕ್ಯಾಂಟೀನ್ ಸಿಬ್ಬಂದಿ ಹೇಳುತ್ತಾರೆ. ಹಾಗಂದ ಬ್ಯಾಗ್‌ನಲ್ಲಿದ್ದ ಕೆಎಫ್‌ಸಿ ಚಿಕನ್ ತೆಗೆದ ಆಫ್ರಿಕನ್ ಸ್ಯಾಂಜೋ ಸೇವಿಸುತ್ತಾನೆ. ಇಷ್ಟು ಸಾಲದೆಂಬಂತೆ ನಿಮಗೂ ಈ ನಾನ್ ವೆಜ್ ತಿನಿಸುಬೇಕೇ ಎಂದು ಸ್ಯಾಂಜೋ ಕೇಳುತ್ತಾನೆ.
