ಉದಯವಾಹಿನಿ, ಉತ್ತರ ಪ್ರದೇಶ: ಇಲ್ಲಿನ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಬರೀ ಉತ್ತರ ಪ್ರದೇಶ ಅಷ್ಟೇ ಅಲ್ಲ, ದೇಶಾದ್ಯಂತ ಬೇರೆ ಬೇರೆ ರಾಜ್ಯಗಳಲ್ಲಿ ಧಾರ್ಮಿಕ ಮತಾಂತರ ನಡೆಸುತ್ತಿದ್ದ ಅತೀ ದೊಡ್ಡ ಜಾಲವೊಂದನ್ನು ಬೇಧಿಸಿದ್ದಾರೆ. ಈ ದಂಧೆಯು ಐಸಿಸ್ ಉಗ್ರರ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತಿತ್ತು. ಒಟ್ಟು 10 ಮಂದಿಯನ್ನು ಬಂಧಿಸಲಾಗಿದ್ದು, ಈ ಖದೀಮರು ಸದ್ಯ 6 ರಾಜ್ಯಗಳಲ್ಲಿ ಮತಾಂತರ ದಂಧೆ ನಡೆಸುತ್ತಿರೋ ಬಗ್ಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ.
33 ಹಾಗೂ 18 ವರ್ಷದ ಸಹೋದರಿಯರು ನಾಪತ್ತೆ: ಮಾರ್ಚ್‌ನಲ್ಲಿ ಆಗ್ರಾದಲ್ಲಿ 33 ಮತ್ತು 18 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ಕಾಣೆಯಾದ ಬಗ್ಗೆ ವರದಿಯಾದ ನಂತರ ತನಿಖೆ ಪ್ರಾರಂಭವಾಯಿತು. ನಂತರ ಪೊಲೀಸರು ಅವರನ್ನು ಧರ್ಮ ಬದಲಾಯಿಸಲು ಒತ್ತಾಯಿಸಲಾಗಿದೆ ಮತ್ತು ಮೂಲಭೂತವಾದಿಗಳಾಗಿ ಪರಿವರ್ತಿಸಲಾಗುತ್ತಿದೆ ಎಂದು ಕಂಡುಹಿಡಿದರು. ಈ ವೇಳೆ ತನಿಖೆ ಚುರುಕು ಪಡೆಯಿತು.
ಎಕೆ 47 ರೈಫಲ್ ಹಿಡಿದಿರುವ ಹುಡುಗಿಯ ಚಿತ್ರ: ಆಗ್ರಾ ಪೊಲೀಸ್ ಆಯುಕ್ತ ದೀಪಕ್ ಕುಮಾರ್ ಅವರ ಪ್ರಕಾರ, ಸಹೋದರಿಯರಲ್ಲಿ ಒಬ್ಬರು ಎಕೆ-47 ರೈಫಲ್ ಹಿಡಿದಿರುವ ಹುಡುಗಿಯೊಬ್ಬಳನ್ನು ತೋರಿಸುವ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಚಿತ್ರವನ್ನು ಸಹ ಬಳಸಿದ್ದರು. ‘ಲವ್ ಜಿಹಾದ್’ ಮತ್ತು ಮೂಲಭೂತವಾದದಲ್ಲಿ ತೊಡಗಿರುವ ಧಾರ್ಮಿಕ ಮತಾಂತರಿ ಗ್ಯಾಂಗ್ ಸಹೋದರಿಯರನ್ನು ಗುರಿಯಾಗಿಸಿಕೊಂಡಿದೆ ಅಂತ ತನಿಖೆಯಲ್ಲಿ ತಿಳಿದು ಬಂದಿದೆ.
