ಉದಯವಾಹಿನಿ, ನಟ ಪ್ರಥಮ್ ಇತ್ತೀಚೆಗೆ ದೇವಸ್ಥಾನದ ಪೂಜೆಗೆಂದು ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದ ಶಕ್ತಿ ದೇವತೆ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿರುತ್ತಾರೆ. ಈ ವೇಳೆ ಕೆಲ ಕಿಡಿಗೇಡಿಗಳು ದರ್ಶನ್ ಅಭಿಮಾನಿಗಳು ಅಂತಾ ಅವರ ಹೆಸರು ಹೇಳಿಕೊಂಡು ಪ್ರಥಮ್‌ರನ್ನ ಸುತ್ತುವರೆದಿದ್ದಾರೆ. ಬಳಿಕ ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ಕರೆದುಕೊಂಡು ಹೋಗಿ ಮಾರಾಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ ಅಂತಾ ನಟ ಪ್ರಥಮ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಈ ಘಟನೆ ನಡೆದಾಗ ಆ ಜಾಗದಲ್ಲಿ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ಇದ್ದರು ಎಂದಿದ್ದಾರೆ.
ನಟ ಪ್ರಥಮ್ ಹೇಳಿಕೆ ಬಳಿಕ ನಟ ಹಾಗೂ ಬಿಗ್‌ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ತಾನು ಆ ಜಾಗದಲ್ಲಿ ಇರೋ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ನಾನಿದ್ದಿದ್ದು ನಿಜ, ಆದರೆ ಈ ಘಟನೆಗೂ ನನಗೂ ಯಾವುದೇ ರೀತಿ ಸಂಬಂಧವಿಲ್ಲ. ದಯವಿಟ್ಟು ಈ ರೀತಿ ಜಾಲತಾಣದಲ್ಲಿ ವೈರಲ್ ಆಗ್ತಿರುವ ತಹರೇವಾರಿ ಸುದ್ದಿಗೆ ನಮ್ಮ ಕುಟುಂಬದ ಸದಸ್ಯರು ಆತಂಕಕ್ಕೀಡಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
