ಉದಯವಾಹಿನಿ, ವಿಜಯಪುರ: ಕಲುಷಿತ ನೀರು ಸೇವಿಸಿ 30ಕ್ಕೂ ಅಧಿಕ ಜನ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳ ಗ್ರಾಮದಲ್ಲಿ ನಡೆದಿದೆ.ಗ್ರಾಮ ಪಂಚಾಯತಿಯಿಂದ ಪೂರೈಕೆಯಾಗುವ ನೀರು ಕುಡಿದು ಕಳೆದ ಮೂರು ದಿನಗಳಿಂದ ೩೦ಕ್ಕೂ ಅಧಿಕ ಜನ ಅಸ್ವಸ್ಥಗೊಂಡು ಪರದಾಡುತ್ತಿದ್ದಾರೆ. ಈ ಹಿನ್ನೆಲೆ ವೈದರ ತಂಡವೊಂದು ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು,
ಎರಡು ಅಂಬುಲೆನ್ಸ್ ಕೂಡ ಅಲ್ಲಿಯೇ ಇವೆ.ಅಲ್ಲದೇ ಕೆಲವರು ಚಿಕಿತ್ಸೆಗಾಗಿ ವಿಜಯಪುರ, ಬಸವನ ಬಾಗೇವಾಡಿ, ಬಾಗಲಕೋಟೆ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಜೊತೆಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಓರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಿಲಾಗಿದೆ.ಊರಿನ ಬಹುತೇಕ ಜನರು ಆಸ್ಪತ್ರೆಗಳಲ್ಲಿ ಠಿಕಾಣಿ ಹೂಡಿದ್ದು, ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
