ಉದಯವಾಹಿನಿ, ಪತಿಗೆ ತಿಳಿಯದಂತೆ ಪ್ರಿಯಕರನೊಂದಿಗೆ ಮಂಚವೇರಿದ್ದ ಪತ್ನಿ, ಇಬ್ಬರೂ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಾಗ ನಡೆದಿದ್ದು ಘೋರ ದುರಂತ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನೇ ಪ್ರಿಯಕರನ ಜೊತೆ ಸೇರಿ ಬರ್ಬರವಾಗಿ ಕೊಲೆ ಮಾಡಿ, ಬಳಿಕ ಆತನ ಶವದ ಪಕ್ಕದಲ್ಲೇ ಕಾಮಕೇಳಿ ನಡೆಸಿರುವ ಪೈಶಾಚಿಕ ಘಟನೆಯೊಂದು ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ನಡೆದಿದೆ. ಈ ಹೇಯ ಕೃತ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಮನುಷ್ಯ ಸಂಬಂಧಗಳು ಎತ್ತ ಸಾಗುತ್ತಿವೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
30 ವರ್ಷದ ಇ-ರಿಕ್ಷಾ ಚಾಲಕ ಸೋನು ಝಾ ಕೊಲೆಯಾದ ದುರ್ದೈವಿ. ಆತನ ಪತ್ನಿ ಅಸ್ಮಿತಾ ಝಾ ಮತ್ತು ಆಕೆಯ ಪ್ರಿಯಕರ, ಟ್ಯೂಷನ್ ಟೀಚರ್ ಹರಿಓಮ್ ಝಾ ಈ ಪಾಪಕೃತ್ಯದ ರೂವಾರಿಗಳು. ಸದ್ಯ ಅಸ್ಮಿತಾಳನ್ನು ಪೊಲೀಸರು ಬಂಧಿಸಿದ್ದು, ಹರಿಓಮ್ ತಲೆಮರೆಸಿಕೊಂಡಿದ್ದಾನೆ.
ಆ ಕರಾಳ ರಾತ್ರಿ ನಡೆದಿದ್ದೇನು? ಇಡೀ ಊರು ನಿದ್ರೆಯಲ್ಲಿತ್ತು. ಆದರೆ, ಸೋನು ಝಾ ಮನೆಯಲ್ಲಿ ಮಾತ್ರ ವಿಧಿ ವಿಚಿತ್ರ ಆಟವಾಡಿತ್ತು. ಪತ್ನಿ ಅಸ್ಮಿತಾ ತನ್ನ ಪ್ರಿಯಕರ ಹರಿಓಮ್‌ನೊಂದಿಗೆ ಏಕಾಂತದಲ್ಲಿದ್ದಳು. ಈ ವೇಳೆ, ಎಂದಿಗಿಂತಲೂ ಬೇಗ ಮನೆಗೆ ಬಂದ ಸೋನು, ಕುಡಿದ ಮತ್ತಿನಲ್ಲಿದ್ದ. ತನ್ನ ಹೆಂಡತಿ ಇನ್ನೊಬ್ಬನ ಜೊತೆ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದನ್ನು ಕಂಡ ಆತನಿಗೆ ರಕ್ತ ಕುದಿಯಿತು.
