ಉದಯವಾಹಿನಿ, ನವದೆಹಲಿ: ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ, ಪಾಕಿಸ್ತಾನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ಶಾಶ್ವತವಾಗಿ ತ್ಯಜಿಸುವವರೆಗೆ ಸಿಂಧೂ ನದಿ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಗುವುದು ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ.ಆಪರೇಷನ್ ಸಿಂಧೂರ’ದ ಚರ್ಚೆಯ ಭಾಗವಾಗಿ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಸಿಂಧೂ ಜಲ ಒಪ್ಪಂದವು ಬಹಳ ವಿಶಿಷ್ಟವಾದ ಒಪ್ಪಂದವಾಗಿದೆ. ನಾನು ಈವರೆಗೂ ಯಾವುದೇ ಒಂದು ದೇಶವು ತನ್ನ ಪ್ರಮುಖ ನದಿಗಳನ್ನು ಯಾವುದೇ ಹಕ್ಕುಗಳಿಲ್ಲದೆ ಬೇರೊಂದು ದೇಶಕ್ಕೆ ಅನುಮತಿಸಿದ್ದನ್ನು ನಾನು ನೋಡಿಲ್ಲ. ಆದ್ದರಿಂದ ಇದು ಅಸಾಧಾರಣ ಒಪ್ಪಂದವಾಗಿತ್ತು. ನಾವು ಈ ಒಪ್ಪಂದವನ್ನು ಸ್ಥಗಿತಗೊಳಿಸಿದರೆ ಈ ಘಟನೆ ನಮ್ಮ ನೆನಪಿಗೆ ಬರುತ್ತದೆ ಅದು ತುಂಬಾ ಮುಖ್ಯವಾದದ್ದು ಎಂದರು.

ಮಂಗಳವಾರ ಕೆಲವರು ಹೇಳುವುದನ್ನು ನಾನು ಕೇಳಿಸಿಕೊಂಡೆ, ಜನರು ಇತಿಹಾಸವನ್ನು ಅಹಿತಕರ ಎಂದುಕೊಳ್ಳುತ್ತಾರೆ. ಜೊತೆಗೆ ಇತಿಹಾಸದ ವಿಷಯಗಳನ್ನು ಮರೆತುಬಿಡಬೇಕೆಂದುಕೊಳ್ಳುತ್ತಾರೆ. ಹೌದು, ಅವರು ಕೇವಲ ಕೆಲವು ವಿಷಯಗಳನ್ನು ಮಾತ್ರ ನೆನಪಿಸಿಕೊಳ್ಳಲು ಇಷ್ಟಪಡುತ್ತಾರೆ ಎಂದು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡಿದ ಜೈಶಂಕರ್, ಭಯೋತ್ಪಾದನೆ ಮಿತಿಮೀರಿ ಹೋಗಿದೆ. ಹೀಗಾಗಿ ಇದು ಸ್ವೀಕಾರಾರ್ಹವಲ್ಲ, ಕಳೆದ ದಶಕದಲ್ಲಿ ಭಾರತವು ಭಯೋತ್ಪಾದನೆಯನ್ನು ಎಸ್‌ಸಿಓ, ಬ್ರಿಕ್ಸ್ ಹಾಗೂ ಕ್ವಾಡ್‌ನಂತಹ ಜಾಗತಿಕ ಮಟ್ಟದಲ್ಲಿ ಪ್ರಸ್ತಾಪಿಸಿತು.

Leave a Reply

Your email address will not be published. Required fields are marked *

error: Content is protected !!