ಉದಯವಾಹಿನಿ, ಬೆಂಗಳೂರು: ಪೊಲೀಸ್‌‍ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವುದು ನನ್ನ ಸೌಭಾಗ್ಯ ಎಂದು ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಕಾರಾಗೃಹಗಳ ಡಿಜಿಪಿ ಮಾಲಿನಿ ಕೃಷ್ಣ ಮೂರ್ತಿಯವರು ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಕೋರಮಂಗಲದ ಕೆಎಸ್‌‍ಆರ್‌ಪಿ ಮೈದಾನದಲ್ಲಿ ಹಮಿಕೊಂಡಿದ್ದ ಬೀಳ್ಕೊಡುಗೆ ಕವಾಯತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.ಪೊಲೀಸ್‌‍ ಇಲಾಖೆಯಲ್ಲಿ ಸುದೀರ್ಘ 35 ವರ್ಷ ಸೇವೆಯಲ್ಲಿ ತೊಡಗಿಕೊಂಡಿರುವುದು ನನಗೆ ತೃಪ್ತಿ ತಂದಿದೆ ಎಂದರು. ಸುದೀರ್ಘ ವೃತ್ತಿ ಜೀವನದ ಕೆಲವು ಸಂದರ್ಭಗಳಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದ್ದೇನೆ. ಪ್ರಮುಖವಾಗಿ ಮಂಡ್ಯ ಜಿಲ್ಲೆ ಎಸ್‌‍ಪಿ ಆಗಿದ್ದ ಸಂದರ್ಭದಲ್ಲಿ ತುಂಬ ಕಷ್ಟಕರ ದಿನವಾಗಿತ್ತು. ಕಾವೇರಿ ಗಲಾಟೆ ಸಂದರ್ಭದಲ್ಲಿ ನಮ ಸಿಬ್ಬಂದಿ ಗಾಯಗೊಂಡಿದ್ದರೂ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ ಜೊತೆ ಕರ್ತವ್ಯಕ್ಕೆ ನಿಂತು ನನಗೆ ಸಹಕರಿಸಿದರು. ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು.

ಅಂದಿನ ಡಿಜಿ,ಎಡಿಜಿಪಿ,ಐಜಿಪಿ ಹಾಗೂ ಡಿಸಿ ಅವರೆಲ್ಲರೂ ಒಂದೇ ತಂಡದಂತೆ ಒಗ್ಗಟ್ಟಿನಿಂದ ಕರ್ತವ್ಯ ನಿಭಾಯಿಸಿ ನನಗೆ ಸಹಕರಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸರಿಸಿದರು. ತದ ನಂತರದಲ್ಲಿ ದಾವಣೆಗೆರೆ ಎಸ್‌‍ಪಿ ಆಗಿದ್ದ ಸಂದರ್ಭದಲ್ಲಿ ತುಂಬ ಕಷ್ಟಕರವಾಗಿತ್ತು. ಆ ಸ್ಥಳದಲ್ಲಿ ನನಗೆ ಎಲ್ಲರೂ ಸಹಕರಿಸಿದ್ದರಿಂದ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂದರು. ಕೆಎಸ್‌‍ಆರ್‌ಪಿ ವಿಭಾಗದಲ್ಲಿ ನಾಲ್ಕೂವರೆ ವರ್ಷ ಸುದೀರ್ಘ ಸೇವೆ ಸಲ್ಲಿಸಿರುವುದು ನನಗೆ ತುಂಬ ಇಷ್ಟವಾಗಿದೆ. ಹಿರಿಯ ಅಧಿಕಾರಿಗಳ ಪ್ರೋತ್ಸಾಹ, ಮಾರ್ಗದರ್ಶನ ದಿಂದ ಉತ್ತಮ ಸೇವೆ ಸಲ್ಲಿಸಿದ್ದೇನೆ ಎಂಬ ಆತವಿಶ್ವಾಸವಿದೆ.ನನ್ನ ವೃತ್ತಿ ಜೀವನದಲ್ಲಿ ನನಗೆ ಬೆಂಬಲವಾಗಿ ನಿಂತು ಸಹಕರಿಸಿದ ಎಲ್ಲಾ ಹಿರಿಯ ಹಾಗೂ ಕಿರಿಯ ಪೊಲೀಸ್‌‍ ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!