ಉದಯವಾಹಿನಿ, ಬೆಂಗಳೂರು: ನಟಿ ರಮ್ಯಾ ಕುರಿತು ಅಶ್ಲೀಲ ಕಾಮೆಂಟ್ಸ್ ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನ ಬಂಧಿಸಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.ಮಾತನಾಡಿದ ಅವರು, ನಟಿ ರಮ್ಯಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಇಬ್ಬರು ಕಿಡಿಗೇಡಿಗಳನ್ನ ಬಂಧಿಸಲಾಗಿದೆ. 11 ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಮ್ಯಾ ದೂರಿನನ್ವಯ ಸಿಸಿಬಿಯವರು ಹಲವರನ್ನ ಗುರುತಿಸಿದ್ದಾರೆ. ಕೆಲವರ ಸ್ಪಷ್ಟ ಮಾಹಿತಿ ಸಿಕ್ಕಿದೆ, ಇಬ್ಬರನ್ನ ಅರೆಸ್ಟ್ ಮಾಡಿದ್ದೇವೆ. ಇನ್ನೂ ಹನ್ನೊಂದು ಜನರ ಮಾಹಿತಿ ಸಿಕ್ಕಿದ್ದು ತನಿಖೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದ ಕಾಮೆಂಟ್‌ಗಳನ್ನೂ ವೆರಿಫೈ ಮಾಡಿದ್ದೇವೆ. 13 ಜನರ ಪೈಕಿ ಇಬ್ಬರನ್ನ ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಅಲ್ಲದೇ ಬಂಧಿತರು ಯಾರ ಅಭಿಮಾನಿ ಅನ್ನೊದರ ಬಗ್ಗೆ ತನಿಖೆ ನಡೆಯುತ್ತಿದೆ. ಯಾರೇ ಆಗಿರಲಿ ಅಶ್ಲೀಲ ಸಂದೇಶ ಹಾಕಿದ್ರೆ ಕಠಿಣ ಕ್ರಮ ಕೈಗೊಳ್ತೀವಿ. ಈ ಬಗ್ಗೆ ಸೈಬರ್ ಪೊಲೀಸರಿಗೆ ವಿಶೇಷ ತರಬೇತಿ ನೀಡಿದ್ದೇವೆ. ಅವಹೇಳನಕಾರಿಯಾಗಿ ಯಾರೇ ಸಂದೇಶ ಹಾಕಿದ್ರೂ ಕ್ರಮ ಕೈಗೊಳ್ತೀವಿ ಅಂತ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
